ಚಾಂಗ್ವಾನ್ ಶೂಟಿಂಗ್ ವಿಶ್ವಕಪ್‌: ಭಾರತದ ಅಂಜುಮ್ ಮೌದ್ಗಿಲ್‌ಗೆ ಕಂಚು

Update: 2022-07-17 14:36 GMT
Photo: twitter.com/KhelNow/

ಚಾಂಗ್ವಾನ್:  ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಶನ್ ಸ್ಪರ್ಧೆಯಲ್ಲಿ ಭಾರತದ ಅಂಜುಮ್ ಮೌದ್ಗಿಲ್ ಕಂಚಿನ ಪದಕ ಗೆದ್ದಿದ್ದಾರೆ. ಆ ಮೂಲಕ ಭಾರತ ಒಟ್ಟು 11 ಪದಕಗಳೊಂದಿಗೆ (ನಾಲ್ಕು ಚಿನ್ನ, ಐದು ಬೆಳ್ಳಿ ಮತ್ತು ಎರಡು ಕಂಚು) ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಅಂಜುಮ್ ಅಂತಿಮ ಸುತ್ತಿನಲ್ಲಿ 402.9 ಅಂಕ ಗಳಿಸಿದ್ದಾರೆ.  ಜರ್ಮನಿಯ ಅನ್ನಾ ಜಾನ್ಸೆನ್ 407.7 ಅಂಕಗಳೊಂದಿಗೆ ಚಿನ್ನವನ್ನು ಪಡೆದುಕೊಂಡಿದ್ದು, ಇಟಲಿಯ ಬಾರ್ಬರಾ ಗಂಬಾರೊ 403.4 ಅಂಕ ಪಡೆದು ಬೆಳ್ಳಿ ಪದಕ ಗೆದ್ದಿದ್ದಾರೆ. .

ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತೆ ಅಂಜುಮ್ ಶನಿವಾರ ನಡೆದ ರ‍್ಯಾಂಕಿಂಗ್ ಸುತ್ತಿನಲ್ಲಿ ಆರನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದಿದ್ದರು. ಇದು ಅವರಿಗೆ ಸತತ ವಿಶ್ವಕಪ್ ಹಂತಗಳಲ್ಲಿ ಎರಡನೇ ವೈಯಕ್ತಿಕ ಪದಕವಾಗಿದೆ. ಕಳೆದ ತಿಂಗಳು ನಡೆದ ಬಾಕು ವಿಶ್ವಕಪ್‌ನಲ್ಲಿ ಇದೇ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದರು.

 ಪುರುಷರ 3ಪಿ ತಂಡ ಸ್ಪರ್ಧೆಯಲ್ಲಿ ಸಂಜೀವ್ ರಜಪೂತ್, ಚೈನ್ ಸಿಂಗ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಅರ್ಹತಾ ಹಂತದಲ್ಲಿ ಎರಡನೇ ಸ್ಥಾನ ಪಡೆದಿದ್ದ ಭಾರತದ ಮೂವರು ಚಿನ್ನದ ಪದಕದ ಪಂದ್ಯದಲ್ಲಿ ಬಲಿಷ್ಠ ಜೆಕ್ ಗಣರಾಜ್ಯ ತಂಡವನ್ನು ಎದುರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News