ರಾಷ್ಟ್ರಪತಿ ಚುನಾವಣೆ: ಮತ ಚಲಾಯಿಸಿದ ಪ್ರಧಾನಿ, ಸರತಿ ಸಾಲಿನಲ್ಲಿ ನಿಂತ ಸಂಸದರು

Update: 2022-07-18 06:33 GMT
Photo: twitter/narendramodi

ಹೊಸದಿಲ್ಲಿ: ಸೋಮವಾರ ಬೆಳಗ್ಗೆ 10 ಗಂಟೆಗೆ ಆರಂಭವಾದ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಿದರು.

ಭಾರತದ 15 ನೇ ರಾಷ್ಟ್ರಪತಿಯ ಆಯ್ಕೆಗೆ  ತಮ್ಮ ಮತ ಚಲಾಯಿಸಲು ಸಂಸದರು ಸಂಸತ್ತಿನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಎಲೆಕ್ಟೋರಲ್ ಕಾಲೇಜಿನ ಭಾಗವಾಗಿರುವ ರಾಜ್ಯದ ಶಾಸಕರು ತಮ್ಮ ರಾಜ್ಯ ವಿಧಾನಸಭೆಗಳಿಂದ ಮತ ಚಲಾಯಿಸುತ್ತಿದ್ದಾರೆ.

64ರ ವಯಸ್ಸಿನ ಎನ್‌ಡಿಎ ಅಭ್ಯರ್ಥಿ ದ್ರೌಪದಿ  ಮುರ್ಮು ಅವರು ಒಟ್ಟು ಮತಗಳ ಶೇಕಡಾ 62 ರಷ್ಟು ಮತಗಳನ್ನು ಗಳಿಸುವ ನಿರೀಕ್ಷೆಯಿದೆ.

ಜುಲೈ 21 ರಂದು ಮತ ಎಣಿಕೆ ನಡೆಯಲಿದ್ದು, ಜುಲೈ 25 ರಂದು ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ರಾಷ್ಟ್ರಪತಿ ಹುದ್ದೆಗೆ ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಸಂಸತ್ತಿನ ಆವರಣದಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಸಂಸದರು ಮತ ಚಲಾಯಿಸುತ್ತಾರೆ. ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಈ ಚುನಾವಣೆಗೆ ಚುನಾವಣಾಧಿಕಾರಿಯಾಗಿದ್ದಾರೆ.

ಒಟ್ಟು 776 ಸಂಸತ್ ಸದಸ್ಯರು ಹಾಗೂ  4,033 ಶಾಸಕರು ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News