ಮ್ಯಾನೇಜರ್ ಬಲವಂತವಾಗಿ ಟಾಯ್ಲೆಟ್ ಕ್ಲೀನರ್ ಕುಡಿಸಿದ್ದಾನೆ: ಅತ್ಯಾಚಾರಕ್ಕೊಳಗಾದ ದಿಲ್ಲಿಯ ಬಾಲಕಿಯ ಕುಟುಂಬದವರ ಆರೋಪ

Update: 2022-07-18 10:29 GMT
Photo:PTI

ಹೊಸದಿಲ್ಲಿ: ಈ ತಿಂಗಳ ಆರಂಭದಲ್ಲಿ ತಾನು ಕೆಲಸ ಮಾಡುತ್ತಿದ್ದ ಶೂ ಫ್ಯಾಕ್ಟರಿಯೊಂದರ ಮ್ಯಾನೇಜರ್‌ನಿಂದ ಅತ್ಯಾಚಾರಕ್ಕೊಳಗಾದ 15 ವರ್ಷದ ದಿಲ್ಲಿ ಬಾಲಕಿಗೆ ಮ್ಯಾನೇಜರ್  ಬಲವಂತವಾಗಿ ಟಾಯ್ಲೆಟ್ ಕ್ಲೀನರ್ ಕುಡಿಸಿದ್ದಾನೆ ಎಂದು ಬಾಲಕಿಯ ಕುಟುಂಬ ಆರೋಪಿಸಿದೆ.

ಅಪ್ರಾಪ್ತ ವಯಸ್ಕಳನ್ನು ಪರೀಕ್ಷಿಸಿದ ವೈದ್ಯರು ಆಕೆಯನ್ನು "ವಿನಾಶಕಾರಿ ವಸ್ತು" ಸೇವಿಸುವಂತೆ ಮಾಡಲಾಗಿದೆ ಎಂದು ಹೇಳಿದ್ದಾರೆ ಎಂದು ದಿಲ್ಲಿ ಪೊಲೀಸ್ ಮೂಲಗಳು 'ದಿ ಪ್ರಿಂಟ್‌'ಗೆ ತಿಳಿಸಿವೆ.

ಕಾರ್ಖಾನೆಯ ವ್ಯವಸ್ಥಾಪಕನನ್ನು ದಿಲ್ಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.  ಘಟನೆ ನಡೆದ ಎರಡು ವಾರಗಳ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ತನ್ನ ಮಗಳು ಜುಲೈ 2 ರಂದು ಕೆಲಸದಿಂದ ಮನೆಗೆ ಹಿಂದಿರುಗಿದಾಗ ಏನನ್ನೂ ಹೇಳಲಿಲ್ಲ, ಆ ದಿನವೇ ಆಕೆಯ  ಅತ್ಯಾಚಾರ ನಡೆದಿತ್ತು. ಆದರೆ ಮೂರು ದಿನಗಳ ನಂತರ ತನ್ನ ಇಬ್ಬರು ಸಹೋದ್ಯೋಗಿಗಳಿಗೆ ವಿಷಯ ತಿಳಿಸಿದಳು. ಅದೇ ದಿನ  31 ವರ್ಷದ ಫ್ಯಾಕ್ಟರಿ ಮ್ಯಾನೇಜರ್ ಮಗಳಿಗೆ ಬಲವಂತವಾಗಿ ಟಾಯ್ಲೆಟ್ ಕ್ಲೀನರ್ ಕುಡಿಯುವಂತೆ ಮಾಡಿದ್ದಾನೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ.

15 ವರ್ಷದ ಬಾಲಕಿ ಪ್ರಸ್ತುತ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (ಎಐಐಎಂಎಸ್) ಚಿಕಿತ್ಸೆ ಪಡೆಯುತ್ತಿದ್ದಾಳೆ.

 "ಅವಳಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ, ಆಕೆಯ ಬಾಯಿ ಸುಟ್ಟುಹೋಗಿದೆ. ಆಕೆಗೆ ನೀರು ಅಥವಾ ಏನನ್ನೂ ಕುಡಿಯಲು ಸಾಧ್ಯವಾಗುತ್ತಿಲ್ಲ.  ತನ್ನ  ಮಗಳು ಆರಂಭದಲ್ಲಿ ತನ್ನೊಂದಿಗೆ ಕೈ ಸನ್ನೆಗಳನ್ನು ಬಳಸಿ ಮಾತ್ರ ಸಂವಹನ ನಡೆಸುತ್ತಿದ್ದಳು'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News