ರಾಷ್ಟ್ರಪತಿ ಚುನಾವಣೆ: ಪಕ್ಷದ ನಿಲುವಿಗೆ ವ್ಯತಿರಿಕ್ತವಾಗಿ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದ ಕಾಂಗ್ರೆಸ್‌ ಶಾಸಕ

Update: 2022-07-18 12:42 GMT
Photo: Twitter/iammdmoquim

ಭುವನೇಶ್ವರ್:‌ ಒಡಿಶಾದ ಕಾಂಗ್ರೆಸ್ ಶಾಸಕ ಮಹಮ್ಮದ್ ಮೊಕ್ವಿಮ್ ಅವರು ಪಕ್ಷದ ನಿಲುವಿಗೆ ವಿರುದ್ಧವಾಗಿ ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದ್ದಾರೆ. ಮುರ್ಮು ಒಡಿಶಾ ಮೂಲದವರಾಗಿದ್ದು, ಹಾಗಾಗಿಯೇ ಅವರ ಪರ ಮತ ಚಲಾಯಿಸಿದ್ದೇನೆ ಎಂದು ಮೊಕ್ವಿಮ್‌ ಹೇಳಿಕೊಂಡಿದ್ದಾರೆ. ʼನನ್ನ ಮನದಾಳದ ಮಾತನ್ನು ಕೇಳಿದ್ದೇನೆ, ಅದು ನನ್ನ ವೈಯಕ್ತಿಕ ನಿರ್ಧಾರವಾಗಿದ್ದು, ಮಣ್ಣಿಗಾಗಿ ಏನಾದರೂ ಮಾಡುವಂತೆ ಮನಸ್ಸು ಮಾರ್ಗದರ್ಶನ ನೀಡಿದ್ದು, ಅದಕ್ಕಾಗಿಯೇ ಆಕೆಗೆ ಮತ ಹಾಕಿದ್ದೇನೆʼ ಎಂದು ಮೊಕ್ವಿಂ ಹೇಳಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸದರು ಮತ್ತು ಶಾಸಕರು ಮತದಾರರಾಗಿರುತ್ತಾರೆ. ಅದಾಗ್ಯೂ, ಪಕ್ಷಗಳು ಬೈಂಡಿಂಗ್ ವಿಪ್‌ಗಳನ್ನು ನೀಡಲು ಸಾಧ್ಯವಿಲ್ಲ, ಆದ್ದರಿಂದ ಪಕ್ಷಾಂತರ ವಿರೋಧಿ ಕಾನೂನು ಕಾರ್ಯರೂಪಕ್ಕೆ ಬರುವುದಿಲ್ಲ.  

  ಸಂತಾಲ್ ಬುಡಕಟ್ಟಿಗೆ ಸೇರಿದ ಮುರ್ಮು ಅವರು ಗೆದ್ದರೆ, ಬುಡಕಟ್ಟು ಸಮುದಾಯದ ಮೊದಲ ರಾಷ್ಟ್ರಪತಿಯಾಗಲಿದ್ದಾರೆ. ಅವರ ಬುಡಕಟ್ಟು ಗುರುತಿಗಾಗಿ ಹಲವಾರು ಎನ್‌ಡಿಎ-ಯೇತರ ಪಕ್ಷಗಳು ಮುರ್ಮು ಅವರಿಗೆ ಬೆಂಬಲ ನೀಡಿದ್ದಾರೆ. ವಿಶೇಷವಾಗಿ ಬುಡಕಟ್ಟು ಅಥವಾ ಇತರ ಹಿಂದುಳಿದ ಸಮುದಾಯಗಳ ಗಮನಾರ್ಹ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳಲ್ಲಿ ಎನ್ಡಿಎಯೇತರ ಪಕ್ಷಗಳು ಎನ್‌ಡಿಎ ಅಭ್ಯರ್ಥಿಗೆ ಮತ ಹಾಕಿವೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News