ಮಂಗಳೂರು-ಉಡುಪಿ ಹೆದ್ದಾರಿ ಪ್ರಯಾಣಿಕರ ಗೋಳು : ಚರ್ಚೆಗೆ ಕಾರಣವಾದ ವಿ ಎಸ್ ಆಚಾರ್ಯರ ಪುತ್ರನ ಫೇಸ್ ಬುಕ್ ಪೋಸ್ಟ್

Update: 2022-07-18 15:00 GMT

ಮಂಗಳೂರು, ಜು. ೧೮ : ಉಡುಪಿ-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಶೋಚನೀಯ ಸ್ಥಿತಿಯ ಬಗ್ಗೆ ಕರ್ನಾಟಕದ ಮಾಜಿ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ದಿವಂಗತ ವಿ.ಎಸ್.ಆಚಾರ್ಯ ಅವರ ಪುತ್ರ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಡಾ.ಕಿರಣ್ ಆಚಾರ್ಯ ರವಿವಾರ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಉಡುಪಿ-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 66 ರ ಅವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಟೋಲ್‌ ಕಟ್ಟಿಯೇ ಹೋಗಬೇಕಾದ ಈ ಹೆದ್ದಾರಿಯಲ್ಲಿರುವ  ಅಪಾಯಕಾರಿ ರಸ್ತೆ ಗುಂಡಿಗಳ ಚಿತ್ರಗಳನ್ನು ಹಂಚಿಕೊಂಡ ಅವರು, ಅವುಗಳಲ್ಲಿ ಕೆಲವು ದ್ವಿಚಕ್ರ ವಾಹನ ಸವಾರರಿಗೆ ಮಾರಣಾಂತಿಕವಾಗಬಹುದು ಎಂದು ಎಚ್ಚರಿಸಿದ್ದಾರೆ.  

ʼನೀವು ಟೋಲ್‌ ಕಟ್ಟುವ ಪ್ರತಿ ಪೈಸೆಗೂ ಒಂದು ಗುಂಡಿ ಗ್ಯಾರಂಟಿʼ ಎಂದು ಬರೆದಿರುವ ಪೋಸ್ಟರ್ ಒಂದನ್ನು  ಆಚಾರ್ಯ ತಮ್ಮ ಪೋಸ್ಟ್ ನಲ್ಲಿ ಹಾಕಿದ್ದಾರೆ. 

ಸರಕಾರ ಜನರನ್ನು ಲಘುವಾಗಿ ತೆಗೆದುಕೊಂಡಿರುವುದರಿಂದ ಯಾವುದೇ ಅಧಿಕಾರಿ ಅಥವಾ ರಾಜಕಾರಣಿಯನ್ನು ಟ್ಯಾಗ್ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ  ಎಂದು ಆಚಾರ್ಯ ಅವರು ಕಿಡಿಕಾರಿದ್ದಾರೆ. 

ಆಚಾರ್ಯ ಅವರ ಪೋಸ್ಟ್‌ ನೆಟ್ಟಿಗರ ಗಮನವನ್ನು ಸೆಳೆದಿದ್ದು, ಅವರು ಎತ್ತಿರುವ ವಿಷಯದ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಪೋಸ್ಟ್ ನ ಕಮೆಂಟ್ ವಿಭಾಗದಲ್ಲಿ  ಹಲವರು  ಜನರ ಕುಂದುಕೊರತೆಗಳು ಹಾಗು ಅದಕ್ಕೆ ಸರಕಾರದ ಸ್ಪಂದನೆಯ ಕೊರತೆ  ಬಗ್ಗೆ ದನಿಯೆತ್ತಿದ್ದಾರೆ.  ಸಾಮಾನ್ಯ ನಾಗರಿಕರ ಸುರಕ್ಷತೆಯ ಬಗ್ಗೆ ಆಡಳಿತ ಮತ್ತು ಸಚಿವಾಲಯದ ಅಸಡ್ಡೆಯ ಬಗ್ಗೆ ನೆಟ್ಟಿಗರಿಂದ ಆಕ್ರೋಶವೂ ವ್ಯಕ್ತವಾಗಿದೆ. ಕೆಲವರು ಕೇಂದ್ರ ಹೆದ್ದಾರಿ ಸಚಿವ  ನಿತಿನ್ ಗಡ್ಕರಿ ಮತ್ತು ಇತರ ಅಧಿಕಾರಿಗಳನ್ನು ಕಮೆಂಟ್‌ಗಳ ವಿಭಾಗದಲ್ಲಿ ಟ್ಯಾಗ್‌ ಮಾಡಿ ಸಮಸ್ಯೆಯನ್ನು ಅವರ ಗಮನಕ್ಕೆ ತರುವ ಪ್ರಯತ್ನವನ್ನೂ ಮಾಡಿದ್ದಾರೆ. ಇನ್ನು ಕೆಲವರು ಮೋದಿ ಹೆಸರಲ್ಲೇ ಮತ ಗಳಿಸುವುದು ಇನ್ನು ಕರ್ನಾಟಕದಲ್ಲಿ ಕಷ್ಟ. ಇಲ್ಲಿನ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ಕೇಳಬೇಕಾಗಿದೆ ಎಂದು ಇನ್ನು ಕೆಲವರು ಹೇಳಿದ್ದಾರೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News