ವಿಶ್ವದ ಇತರ ಭಾಗಗಳಿಂದ ರಶ್ಯವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ: ಪುಟಿನ್

Update: 2022-07-18 16:54 GMT

ಮಾಸ್ಕೊ, ಜು.18: ರಶ್ಯವನ್ನು ವಿಶ್ವದ ಇತರ ಭಾಗಗಳಿಂದ ಪ್ರತ್ಯೇಕಿಸಲು ಸಾಧ್ಯವೇ ಇಲ್ಲ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.ಪ್ರಪಂಚದ ಉಳಿದ ಭಾಗಗಳಿಂದ ಪ್ರತ್ಯೇಕವಾದರೆ ನಾವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ. ಆದರೆ ನಮ್ಮನ್ನು ವಿಶ್ವದ ಇತರ ಭಾಗಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂಬುದೂ ಅಷ್ಟೇ ಸ್ಪಷ್ಟ ವಿಷಯ ಎಂದ ಪುಟಿನ್, ತನ್ನದೇ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವತ್ತ ಮತ್ತು ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಗಳಿಗೆ ನೆರವಾಗಲು ಗಮನ ಹರಿಸಬೇಕು ಎಂದು ಹೇಳಿದರು.

 ಒಂದು ಕಂಪಾಸ್ ಮೂಲಕ ವೃತ್ತ ಎಳೆದು ಇದರಿಂದ ಹೊರಗೆ ಕಾಲಿರಿಸುವಂತಿಲ್ಲ ಎಂದು ಗೋಡೆ ಬರೆಯಲು ಸಾಧ್ಯವೇ ಇಲ್ಲ ಎಂದು ಸರಕಾರಿ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ಸಭೆಯಲ್ಲಿ ಪುಟಿನ್ ಹೇಳಿದ್ದಾರೆ. ಉಕ್ರೇನ್‌ನಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯರ ವ್ಯಾಪಕ ನಿರ್ಬಂಧದಿಂದಾಗಿ ಎದುರಾಗಿರುವ ಬೃಹತ್ ಹೈಟೆಕ್ ಸಮಸ್ಯೆಯನ್ನು ನಿವಾರಿಸಿಕೊಳ್ಳುವ ಸಾಮರ್ಥ್ಯ ದೇಶಕ್ಕಿದೆ. ಇದು ನಮ್ಮ ದೇಶಕ್ಕೆ ಭಾರೀ ಸವಾಲಾಗಿದೆ. ಈ ಸಮಸ್ಯೆಗೆ ನಾವು ಶಕ್ತಿಯುತ ಮತ್ತು ಸಮರ್ಥ ರೀತಿಯಲ್ಲಿ ಹೊಸ ಪರಿಹಾರಗಳನ್ನು ಹುಡುಕುತ್ತೇವೆ ಎಂದವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News