​ಹೊಸ ಸಾರ್ವತ್ರಿಕ ಚುನಾವಣೆಗೆ ಇಮ್ರಾನ್ ಆಗ್ರಹ‌

Update: 2022-07-18 17:42 GMT

 
ಇಸ್ಲಮಾಬಾದ್, ಜು.18: ಪಂಜಾಬ್ ವಿಧಾನಸಭೆಗೆ ನಡೆದ ನಿರ್ಣಾಯಕ ಉಪಚುನಾವಣೆಯಲ್ಲಿ ಅಮೋಘ ಗೆಲುವು ಸಾಧಿಸುವ ಜತೆಗೆ, ಪ್ರಧಾನಿ ಶಹಬಾರ್ ನವಾರ್ ಶರೀಫ್ಗೂ ತೀವ್ರ ಆಘಾತ ನೀಡಿದ್ದು, ಅವರ ಪುತ್ರ ಹಂಝಾ ಶಹಬಾರ್ ಪಂಜಾಬ್ನ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. 
ಈ ಗೆಲುವಿನಿಂದ ಹುರುಪುಗೊಂಡಿರುವ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ಖಾನ್ ದೇಶದಲ್ಲಿ ಹೊಸದಾಗಿ ಸಾರ್ವತ್ರಿಕ ಚುನಾವಣೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಸುಪ್ರೀಂಕೋರ್ಟ್ನ ಆದೇಶದಂತೆ ಮುಖ್ಯಮಂತ್ರಿ ಆಯ್ಕೆಗೆ ಜುಲೈ 22ರಂದು ಚುನಾವಣೆ ನಡೆಯಲಿದ್ದು ಪಿಟಿಐ- ಪಿಎಂಎಲ್ಕ್ಯೂ ಜಂಟಿ ಅಭ್ಯರ್ಥಿ ಚೌಧರಿ ಪರ್ವೇರ್ ಇಲಾಹಿ ರಾಜಕೀಯವಾಗಿ ಅತ್ಯಂತ ನಿರ್ಣಾಯಕವಾಗಿರುವ ಪಂಜಾಬ್ ಪ್ರಾಂತದ ಮುಖ್ಯಮಂತ್ರಿಯಾಗಲಿದ್ದಾರೆ. 
ಗೆಲುವಿನ ಬಳಿಕ ಪಕ್ಷದ ಕಾರ್ಯಕರ್ತರು ಮತ್ತು ಪಂಜಾಬ್ನ ಮತದಾರರಿಗೆ ಅಭಿನಂದನೆ ಸಲ್ಲಿಸಿರುವ ಇಮ್ರಾನ್ ‘ನೀವು ಪಿಎಂಎಲ್-ಎನ್ ಅಭ್ಯರ್ಥಿಯನ್ನಷ್ಟೇ ಅಲ್ಲ, ಸಂಪೂರ್ಣ ಸರಕಾರಿ ಯಂತ್ರವನ್ನು, ಪೊಲೀಸರ ದೌರ್ಜನ್ಯವನ್ನು ಮತ್ತು ಸಂಪೂರ್ಣ ಪಕ್ಷಪಾತಿಯಾದ ಪಾಕಿಸ್ತಾನದ ಚುನಾವಣಾ ಆಯೋಗವನ್ನು ಸೋಲಿಸಿದ್ದೀರಿ’ ಎಂದು ಟ್ವೀಟ್ ಮಾಡಿದ್ದಾರೆ.
 ಮಿತ್ರಪಕ್ಷಗಳಾದ ಪಿಎಂಎಲ್-ಕ್ಯೂ, ಎಂಡಬ್ಕ್ಯೂಎಂ ಮತ್ತು ಎಸ್ಐಸಿ ಪಕ್ಷಗಳಿಗೆ ಧನ್ಯವಾದ ಅರ್ಪಿಸಿದ ಅವರು, ವಿಶ್ವಾಸಾರ್ಹ ಚುನಾವಣಾ ಆಯೋಗದ ನೇತೃತ್ವದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಸಾರ್ವತ್ರಿಕ ಚುನಾವಣೆ ಈಗ ಅಗತ್ಯವಾಗಿ ಆಗಬೇಕಿದೆ ಎಂದರು. 
369 ಸದಸ್ಯರ ಪಂಜಾಬ್ ವಿಧಾನಸಭೆಯಲ್ಲಿ ಪಿಟಿಐ 178 ಮತ್ತು ಪಿಎಂಎಲ್ಕ್ಯೂ 10 ಸದಸ್ಯರನ್ನು ಹೊಂದಿದೆ. ಪಿಎಂಎಲ್-ಎನ್ 167, ಅದರ ಮಿತ್ರಪಕ್ಷ ಪಿಪಿಪಿ 7 ಸದಸ್ಯರನ್ನು ಹೊಂದಿದ್ದರೆ, 6 ಪಕ್ಷೇತರರು ಹಾಗೂ ರಾಹಿ ಹಖ್ ಪಕ್ಷದ ಒಬ್ಬ ಸದಸ್ಯರಿದ್ದಾರೆ. 
ಪಿಎಂಎಲ್-ಎನ್ ಪಕ್ಷ ಸೋಲನ್ನು ಒಪ್ಪಿಕೊಂಡಿದೆ. ಆದರೆ ಪಕ್ಷದ ಮುಖಂಡ, ಪ್ರಧಾನಿ ಶಹಬಾರ್, ಇಮ್ರಾನ್ಖಾನ್ ರಾಜಕೀಯದಲ್ಲಿ ಪ್ರಮುಖ ಹುದ್ದೆ ನಿರ್ವಹಿಸಲು ಅಯೋಗ್ಯ ವ್ಯಕ್ತಿ. ಅವರೊಬ್ಬ ಅಧಿಕಾರದ ಲಾಲಸೆಯ ವ್ಯಕ್ತಿ ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News