×
Ad

ವಾಯು ಸುರಕ್ಷತೆ:ತಾಂತ್ರಿಕ ದೋಷಗಳ ಹೆಚ್ಚಳಕ್ಕೆ ಕಾರಣ ಗುರುತಿಸಿದ ಡಿಜಿಸಿಎ

Update: 2022-07-18 23:28 IST

‌ಹೊಸದಿಲ್ಲಿ,ಜು.18: ದೋಷಗಳ ತಪ್ಪು ನಿರ್ಣಯ ಮತ್ತು ಯಾನಕ್ಕೆ ಮುನ್ನ ವಿಮಾನದ ಕ್ಷಮತೆಯ ಪ್ರಮಾಣೀಕರಣಕ್ಕೆ ಮಾನವಶಕ್ತಿಯ ಕೊರತೆ ಇತ್ತೀಚಿನ ವಾರಗಳಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳಿಂದ ತಾಂತ್ರಿಕ ದೋಷಗಳು ಹೆಚ್ಚಾಗಿ ವರದಿಯಾಗುತ್ತಿರುವುದಕ್ಕೆ ಮುಖ್ಯ ಕಾರಣಗಳಾಗಿವೆ ಎಂದು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ಗುರುತಿಸಿದೆ.

ಆರ್ಥಿಕ ಮುಗ್ಗಟ್ಟಿನಲ್ಲಿರುವ ವಿಮಾನಯಾನ ಸಂಸ್ಥೆಗಳು ‘ಕನಿಷ್ಠ ಉಪಕರಣ ಪಟ್ಟಿ (ಎಂಇಎಲ್)’ಯಡಿ ವಿಮಾನಗಳನ್ನು ಯಾನಕ್ಕೆ ಬಿಡುಗಡೆಗೊಳಿಸುವ ಹೆಚ್ಚುತ್ತಿರುವ ಪ್ರವೃತ್ತಿಯನ್ನು ತಾಂತ್ರಿಕ ದೋಷಗಳು ಹೆಚ್ಚಲು ಮೂರನೇ ಕಾರಣ ಎಂದು ಡಿಜಿಸಿಎ ಗುರುತಿಸಿದೆ. ಈ ಪಟ್ಟಿಯಡಿ ನಿರ್ಣಾಯಕವಲ್ಲದ ಬಿಡಿಭಾಗವನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ದುರಸ್ತಿಗೊಳಿಸಲು ಅಥವಾ ಬದಲಿಸಲು ಅವಕಾಶದೊಂದಿಗೆ ವಿಮಾನದ ಹಾರಾಟಕ್ಕೆ ಅನುಮತಿಯನ್ನು ನೀಡಲಾಗುತ್ತದೆ.

ಜು.28ರೊಳಗೆ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಸೋಮವಾರ ವಿಮಾನಯಾನ ಸಂಸ್ಥೆಗಳಿಗೆ ತಾಕೀತು ಮಾಡಿರುವ ಡಿಜಿಸಿಎ,ಇದಕ್ಕೆ ವಿಫಲಗೊಂಡರೆ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News