ಯುವಜನತೆ ಕೃಷಿ ಬಗ್ಗೆ ಒಳವು ತೋರಿಸಬೇಕು: ನವೀನ್‍ ಚಂದ್ರ

Update: 2022-07-18 17:58 GMT

ಪಡುಬಿದ್ರಿ: ಯುವಜನತೆ  ವಿದ್ಯಾವಂತರಾಗಿ ಕೃಷಿ ಬಗ್ಗೆ ಹೆಚ್ಚಿನ ಒಲವು ತೋರಿಸಿದರೆ  ನಮ್ಮ ದೇಶಕ್ಕೆ ಬೇಕಾದ ಆಹಾರವನ್ನು ಹೂರ ದೇಶದಿಂದ ಅಮದು ಮಾಡುವ ಪರಿಸ್ಥಿತಿ ಬರುವುದಿಲ್ಲ ಎಂದು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ನವೀನ್‍ ಚಂದ್ರ ಜೆ.ಶೆಟ್ಟಿ ಹೇಳಿದರು.

ಅವರು ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ನಡೆದ ರೈತ ಮಿತ್ರ ನೇಜಿ ನೇಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಕೃಷಿ ಬದುಕಿನಲ್ಲಿ  ಅರೋಗ್ಯ ವಂತರಾಗಿ ದೀರ್ಘ ಆಯುಷ್ಯ ರಾಗಿ ಬದುಕಿದವರು. ಅದರೆ ಇಂದು ಅಧುನಿಕ ಜೀವನ ಶೈಲಿಯಲ್ಲಿ ಬದುಕುತ್ತಿರುವುದರಿಂದ ಮಧುಮೇಹ ಕಾಯಿಲೆಗಳು ಇಳಿ ವಯಸ್ಸಿನಲ್ಲಿ ಬಂದು ಬದುಕುನ್ನು ಬೇಗನೆ ಕೂನೆಗೂಳ್ಳುವಂತಾಗಿದೆ ಎಂದರು. 

ಯುವ ಕೃಷಿಕರಾದ  ಸುಕೇಶ್ ರಾಜ್ ಬೀಡು ಹಾಗು  ಮಹೇಂದ್ರ ಪೂಜಾರಿ ಯವರನ್ನು ಸಾನ್ಮನಿಸಿ ಗೌರವಿಸಲಾಯಿತು. ರೋಟರಿ ಅಧ್ಯಕ್ಷೆ ಗೀತಾ ಅರುಣ್ ಅಧ್ಯಕ್ಷೆತೆ ವಹಿಸಿದ್ದರು. 

ಪೂರ್ವ ಸಹಾಯಕ ಗವರ್ನರ್  ಗಣೇಶ್ ಅಚಾರ್ಯ ಉಚ್ಚಿಲ, ನಿಕಟ ಪೂರ್ವ ಸಹಾಯಕ ಗವರ್ನರ್ ಗಣೇಶ್ ಅಚಾರ್ಯ ಉಚ್ಚಿಲ, ಪೂರ್ವ ಅಧ್ಯಕ್ಷ ರಮೀಜ್ ಹುಸೇನ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ,  ಕಾರ್ಯಕ್ರಮದ ನಿರ್ದೇಶಕ ರಾದ ಸುಧಾಕರ್ ಕೆ, ಹೇಮಲತಾ ಸುವರ್ಣ ಉಪಸ್ಥಿತಿರಿದ್ದರು. ರೋಟರಿ ಅಧ್ಯಕ್ಷೆ ಗೀತಾ ಅರುಣ್ ಸ್ವಾಗತಿಸಿ, ಪುಷ್ಪಲತಾ ಅಚಾರ್ಯ  ವಂದಿಸಿದರು. ಸುಧಾಕರ್ ಕೆ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News