ಐಸಿಎಸ್‍ಇ ಫಲಿತಾಂಶ: ನ್ಯೂ ಶಮ್ಸ್ ಶಾಲೆಗೆ ಆರನೇ ವರ್ಷವೂ ಶೇ.100 ಫಲಿತಾಂಶ

Update: 2022-07-18 18:06 GMT

ಭಟ್ಕಳ: ತರಬಿಯತ್‍ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಶಾಲೆಯು ಹತ್ತನೆ ತರಗತಿಯಲ್ಲಿ ಸತತ ಆರು ವರ್ಷಗಳಿಂದ ಶೇ.100 ಫಲಿತಾಂಶ ದಾಖಲಿಸುತ್ತ ಬಂದಿದ್ದು, ಜು.17ರಂದು ಪ್ರಕಟಗೊಂಡ ಐ.ಎಸಿ.ಎಸ್.ಇ ಹತ್ತನೆ ತರಗತಿಯ ಫಲಿತಾಂಶದಲ್ಲಿ 11 ವಿದ್ಯಾರ್ಥಿಗಳು ಶೇ.90ಕ್ಕೂ ಹೆಚ್ಚು ಅಂಕ ಪಡೆದುಕೊಂಡು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಲಿಯಾಖತ್ ಅಲಿ ತಿಳಿಸಿದ್ದಾರೆ. 

ಅವರು ಸೋಮವಾರ ಹೆಬಳೆ ಪಂಚಾಯತ್ ವ್ಯಾಪ್ತಿಯ ಜಾಮಿಯಬಾದ್‍ ರಸ್ತೆಯಲ್ಲಿರುವ ನ್ಯೂ ಶಮ್ಸ್ ಶಾಲೆಯಲ್ಲಿ ಈ ಕುರಿತು ಮಾಹಿತಿ ನೀಡಿ ಮಾತನಾಡಿದರು.

ಒಟ್ಟು 66 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಶೇ.90ಕ್ಕೂ ಹೆಚ್ಚು ಅಂಕಗಳನ್ನು ಪಡೆದುಕೊಂಡರೆ, 19 ವಿದ್ಯಾರ್ಥಿಗಳು ಶೇ.80ಕ್ಕೂ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. 20 ವಿದ್ಯಾರ್ಥಿಗಳು ಶೇ.70 ರಿಂದ ಶೇ.80% ಅಂಕಗಳನ್ನು ಪಡೆದುಕೊಂಡಿದ್ದು, 16 ವಿದ್ಯಾರ್ಥಿಗಳು ಶೇ.60 ರಿಂದ ಶೇ.70% ಅಂಕಗಳನ್ನು ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದರು.

ಮಿನಾಮ್ ಅಲಿ ಅಕ್ಬರಾ 93.8 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮುಹಮ್ಮದ್ ಸಾದ್ ಮೋಮಿನ್ ಶೇ.93.6 ಅಂಕ ಪಡೆದು ಎರಡನೇ ಸ್ಥಾನದಲ್ಲಿದ್ದು ಸುಂದುಸ್ ಸೈಯದ್ಯ ಅಬ್ದುಲ್‍ ರಹ್ಮಾನ್ ಶೇ.93 ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಸುಹೈಬಾ ಫಾತಿಮಾ ಶೇ.92.6, ಶಹಾರ್ ಬಾನು ಹಾನಿಯಾ ಶೇ.92, ಸಾಜಾಹ ಶೇ.91.8, ಬಿಲ್ಕೀಸ್ ಶೇ.91.2, ಫಿದಾ ಶೇ.91, ಆಯಿಶಾ ಕಾಝಿಯಾ ಶೇ.90.8, ಮುಹಮ್ಮದ್‍ ಉನೈಸ್ ಶೇ. 90.4 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 

ಉತ್ತಮ ಸಾಧನೆ ಮಾಡಿದ ನ್ಯೂ ಶಮ್ಸ್ ಶಾಲೆಯ ವಿದ್ಯಾರ್ಥಿಗಳನ್ನು, ಶಾಲೆಯ ಪ್ರಾಂಶುಪಾಲು ಹಾಗೂ ಶಿಕ್ಷಕ ವರ್ಗಕ್ಕೆ ತರಬಿಯತ್‍ ಎಜ್ಯುಕೇಶನ್ ಸೂಸೈಟಿಯ ಆಡಳಿತ ಮಂಡಳಿ ಅಭಿನಂದಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News