ನೂಪುರ್ ಶರ್ಮ ವೀಡಿಯೋ ನೋಡಿದ್ದಕ್ಕೆ ಇರಿದಿದ್ದಾರೆಂದ ಯುವಕ: ʼಕೋಮು ಪ್ರಕರಣವಲ್ಲʼ ಎಂದ ಪೊಲೀಸರು

Update: 2022-07-19 14:23 GMT

 ಹೊಸದಿಲ್ಲಿ: ಉಚ್ಛಾಟಿತ ಬಿಜೆಪಿ ನಾಯಕಿ ನೂಪುರ್ ಶರ್ಮ ಅವರ ವೀಡಿಯೋ ವೀಕ್ಷಿಸಿದ್ದಕ್ಕಾಗಿ ತನಗೆ ಇರಿಯಲಾಗಿದೆ ಎಂದು ಬಿಹಾರದ ಸೀತಾಮರ್ಹಿ ಎಂಬಲ್ಲಿನ ವ್ಯಕ್ತಿಯೊಬ್ಬ ಆರೋಪಿಸಿದ್ದರೂ ಪೊಲೀಸರು ಈ ಘಟನೆಯ ಹಿಂದೆ ಯಾವುದೇ ಕೋಮುದ್ವೇಷದ ವಿಚಾರವಿಲ್ಲ ಎಂದಿದ್ದಾರೆ.

ಘಟನೆ ಜುಲೈ 17ರಂದು ಬಿಹಾರದ ಸೀತಾಮರ್ಹಿ ಜಿಲ್ಲೆಯ ನಾನ್ಪುರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಅಂಕಿತ್ ಝಾ (23) ಎಂಬಾತನಿಗೆ ಆತನ ವೀಳ್ಯದೆಲೆ ಅಂಗಡಿಯಲ್ಲಿ ಹಲವಾರು ಬಾರಿ ಚಾಕುವಿನಿಂದ ಇರಿಯಲಾಗಿತ್ತು. ನಂತರ ಆತನನ್ನು ಆಸ್ಪತೆಗೆ ದಾಖಲಿಸಲಾಗಿತ್ತು.

ಯುವಕ ತನ್ನ ವಾಟ್ಸ್ಯಾಪ್ ಸಂದೇಶಗಳನ್ನು ನೋಡುತ್ತಿದ್ದಾಗ ಆತ ನೂಪುರ್ ಶರ್ಮ ಅವರ ವೀಡಿಯೋ ನೋಡುತ್ತಿದ್ದಾನೆಂದು ಹತ್ತಿರದಲ್ಲಿದ್ದ ಜನರು ತಗಾದೆ ತೆಗೆದು ಆತನ ಮೇಲೆ ದಾಳಿ ನಡಸಿದ್ದರೆಂದು ಆರೋಪಿಸಲಾಗಿತ್ತು.

ಈ ಪ್ರಕರಣ ಸಂಬಂಧ ದೂರಿನಿಂದ ನೂಪುರ್ ಶರ್ಮ ಅವರ ಉಲ್ಲೇಖವನ್ನು ತೆಗೆದುಹಾಕಿದ ನಂತರವಷ್ಟೇ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು ಎಂದು ಝಾ ಕುಟುಂಬ ಆರೋಪಿಸಿದೆ. ಇದು ಕೋಮು ಸಂಬಂಧಿತ ಘಟನೆಯಲ್ಲ, ನಾಲ್ಕು ಮಂದಿ ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News