ಇರಾನ್ ಗೆ ಟರ್ಕಿ ಅಧ್ಯಕ್ಷರ ಭೇಟಿ

Update: 2022-07-19 17:37 GMT

ಟೆಹ್ರಾನ್, ಜು.19: ಸೋಮವಾರ ಇರಾನ್ ರಾಜಧಾನಿ ಟೆಹ್ರಾನ್‌ ಆಗಮಿಸಿರುವ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್  ಇರಾನ್ ಪರಮೋಚ್ಛ ಮುಖಂಡ ಅಯತುಲ್ಲಾ ಆಲಿ ಖಾಮಿನೈ ಹಾಗೂ ಅಧ್ಯಕ್ಷ ಇಬ್ರಾಹಿಂ ರೈಸಿಯನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

 ‌

ಎರ್ಡೋಗನ್ ಜತೆ ಹಿರಿಯ ಸಚಿವರು, ಅಧಿಕಾರಿಗಳನ್ನು ಒಳಗೊಂಡ ಉನ್ನತ ನಿಯೋಗವೂ ಆಗಮಿಸಿದೆ. ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡಾ ಮಂಗಳವಾರ ಟೆಹ್ರಾನ್‌ ಆಗಮಿಸುವ ನಿರೀಕ್ಷೆಯಿದ್ದು ಬಳಿಕ ಮೂವರು ಮುಖಂಡರು ತ್ರಿಪಕ್ಷೀಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಿರಿಯಾದ ಬಿಕ್ಕಟ್ಟು, ಉಕ್ರೇನ್ ಯುದ್ಧದ ಪರಿಣಾಮಗಳು , ಆಹಾರ ಭದ್ರತೆ ವಿಷಯಗಳು ಶೃಂಗಸಭೆಯಲ್ಲಿ ಪ್ರಮುಖ ಚರ್ಚೆಯ ವಿಷಯವಾಗಲಿದೆ ಎಂದು  ಇರಾನ್ ಮಾಧ್ಯಮಗಳು ವರದಿ ಮಾಡಿವೆ. ನೆರೆಯ ಟರ್ಕಿ ಜತೆ ದೀರ್ಘಾವಧಿಯ ಸಹಕಾರ ಒಪ್ಪಂದಕ್ಕೆ ಇರಾನ್ ಆಸಕ್ತಿ ತೋರಿದ್ದು ಈ ಕುರಿತ ಒಪ್ಪಂದಕ್ಕೆ 2021ರ ನವೆಂಬರ್‌ನಲ್ಲಿ  ಸಹಿ ಬೀಳುವ ನಿರೀಕ್ಷೆಯಿತ್ತು. ಆದರೆ ಬಳಿಕ ಅದನ್ನು ಮುಂದೂಡಲಾಗಿತ್ತು.

ಎರಡೂ ದೇಶಗಳ ಮಧ್ಯೆ ಹಲವು ವರ್ಷಗಳಿಂದ ವ್ಯಾಪಾರ ಸಂಬಂಧವಿತ್ತು. ಆದರೆ ಕೋವಿಡ್ ಸೋಂಕು ಹಾಗೂ ಇರಾನ್ ಮೇಲಿನ ಅಮೆರಿಕದ ನಿರ್ಬಂಧವು ಈ ಸಂಬಂಧಕ್ಕೆ ತೊಡಕಾಗಿತ್ತು. ಇತ್ತೀಚಿನ ದಿನಗಳಲ್ಲಿ ಟರ್ಕಿಯು ಇರಾನ್ನ ಬದ್ಧವೈರಿ ಇಸ್ರೇಲ್ ಜತೆ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಆಸಕ್ತಿ ತೋರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News