ಶಕ್ತಿಶಾಲಿ ಪಾಸ್‌ಪೋರ್ಟ್‌ ಗಳ ಪಟ್ಟಿಯಲ್ಲಿ ಯುಎಇ ಪಾಸ್‌ಪೋರ್ಟ್‌ಗೆ 15ನೇ ಸ್ಥಾನ

Update: 2022-07-19 17:52 GMT
PHOTO :wikipedia

ಅಬುಧಾಬಿ, ಜು.19: ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ ಗಳ ಪಟ್ಟಿಯಲ್ಲಿ ಯುಎಇ ಪಾಸ್‌ಪೋರ್ಟ್‌ಗಳ 15ನೇ ಸ್ಥಾನ ಪಡೆದಿದೆ ಎಂದು ಜಾಗತಿಕ ಹೂಡಿಕೆ ವಲಸೆ ಸಲಹಾ ಸಂಸ್ಥೆ ಇತ್ತೀಚೆಗೆ ಬಿಡುಗಡೆಗೊಳಿಸಿದ ಶ್ರೇಯಾಂಕಪಟ್ಟಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜತೆಗೆ ,ಯುಎಇ ದೇಶ ಸಾಂಕ್ರಾಮಿಕ ವಿಜೇತ ಎಂದೂ ವರದಿಯಲ್ಲಿ ಘೋಷಿಸಲಾಗಿದೆ. ‌ಯುಎಇ ದೇಶದ ವೀಸಾ ಮುಕ್ತ ಅಥವಾ ವೀಸಾ ಆನ್ ಅರೈವಲ್ ವ್ಯವಸ್ಥೆಗೆ 176 ಅಂಕ ನೀಡಲಾಗಿದೆ. ಯುಎಇ ಪಾಸ್‌ಪೋರ್ಟ್‌ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ವಲಯದಲ್ಲಿ ಹಾಗೂ ಅರಬ್ ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿ ಎಂದು ಗುರುತಿಸಿಕೊಂಡಿದೆ.

ಕೊರೋನ ಸೋಂಕಿನ ಬಿಕ್ಕಟ್ಟಿನ ಕಳೆದ 2 ವರ್ಷದುದ್ದಕ್ಕೂ ಒಂದು ವಿಷಯ ತನ್ನ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಯುಎಇ ಪಾಸ್‌ಪೋರ್ಟ್‌ ನ ಬೆಳೆಯುತ್ತಿರುವ ಶಕ್ತಿ. ಯುಎಇ ಸಾಂಕ್ರಾಮಿಕ ವಿಜೇತವಾಗಿದೆ. 2012ರಲ್ಲಿ 64ನೇ ಸ್ಥಾನದಲ್ಲಿದ್ದ ದೇಶವು ಕಳೆದ ದಶಕದಲ್ಲಿ ಸಾಧಿಸಿದ ಗಮನಾರ್ಹ ಸಾಧನೆಯಿಂದ ಈಗ 15ನೇ ಸ್ಥಾನಕ್ಕೆ ತಲುಪಿದೆ ಎಂದು ವರದಿ ಹೇಳಿದೆ. ಯುಎಇ ಶ್ರೀಮಂತ ಹೂಡಿಕೆದಾರರ ಮತ್ತು ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳ ಅತ್ಯಂತ ಆಸಕ್ತಿಯ ಕೇಂದ್ರವಾಗಿ ಪರಿಣಮಿಸಿದ್ದು 2022ರಲ್ಲಿ ಹೆಚ್ಚಿನ ಹೂಡಿಕೆಯ ಒಳಹರಿವಿನ ನಿರೀಕ್ಷೆಯಿದೆ.

2019ರ ನಿವ್ವಳ ಒಳಹರಿವಿಗೆ ಹೋಲಿಸಿದರೆ 2022ರಲ್ಲಿ 208%ದಷ್ಟು ಹೆಚ್ಚಳದ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಕಳೆದ ವರ್ಷ ‘ಆರ್ಟನ್ ಕ್ಯಾಪಿಟಲ್’ ಬಿಡುಗಡೆಗೊಳಿಸಿದ ಜಾಗತಿಕ ಪಾಸ್‌ಪೋರ್ಟ್‌ ಸೂಚ್ಯಂಕದಲ್ಲಿ ಅತ್ಯಧಿಕ ಚಲನಶೀಲತೆ ದಾಖಲಿಸಿದ ದೇಶಗಳಲ್ಲಿ ಯುಎಇ ಅಗ್ರಸ್ಥಾನ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News