×
Ad

ಶ್ರೀಲಂಕಾದಲ್ಲಿ ಹೊಸ ಅಧ್ಯಕ್ಷರ ಆಯ್ಕೆಗೆ ಮೊದಲು ಭಾರತಕ್ಕೆ ಮನವಿ ಮಾಡಿದ ಪ್ರತಿಪಕ್ಷದ ನಾಯಕ ಸಜಿತ್ ಪ್ರೇಮದಾಸ

Update: 2022-07-20 10:09 IST
Photo:twitter

ಕೊಲಂಬೊ: ಶ್ರೀಲಂಕಾದಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಮುಖ ಮತದಾನದ ಮುನ್ನ ಪ್ರತಿಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು ಉನ್ನತ ಹುದ್ದೆಗೆ ಯಾರು ಆಯ್ಕೆಯಾದರು ಎಂಬುದನ್ನು ಲೆಕ್ಕಿಸದೆ ದ್ವೀಪ ರಾಷ್ಟ್ರವನ್ನು ಬೆಂಬಲಿಸುವಂತೆ ಭಾರತಕ್ಕೆ ಮನವಿ ಮಾಡಿದ್ದಾರೆ.

ಶ್ರೀಲಂಕಾದ ವಿರೋಧ ಪಕ್ಷ ಸಮಗಿ ಜನ ಬಲವೇಗಯ ನಾಯಕ ಪ್ರೇಮದಾಸ ಅವರು ನಿನ್ನೆ ಸಂಜೆ ಈ ಕುರಿತು ಟ್ವೀಟ್ ಮಾಡಿದ್ದಾರೆ

"ನಾಳೆ ಯಾರೇ  ಶ್ರೀಲಂಕಾದ ಅಧ್ಯಕ್ಷರಾಗಲಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ, ಭಾರತದ ಎಲ್ಲಾ ರಾಜಕೀಯ ಪಕ್ಷಗಳಿಗೆ ಹಾಗೂ ಭಾರತದ ಜನರಿಗೆ ಲಂಕಾ ತಾಯಿಗೆ ಸಹಾಯ ಮಾಡುವಂತೆ ಜನರು ಈ ವಿಪತ್ತಿನಿಂದ ಹೊರಬರಲು ನೆರವು ನೀಡುವಂತೆ ನನ್ನ ವಿನಮ್ರ ಮತ್ತು ಶ್ರದ್ಧಾಪೂರ್ವಕ ವಿನಂತಿಯಾಗಿದೆ’’ ಎಂದು ಟ್ವಿಟಿಸಿದ್ದಾರೆ.

ಶ್ರೀಲಂಕಾವು ಬೃಹತ್ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಅದರ 22 ಮಿಲಿಯನ್ ಜನಸಂಖ್ಯೆಯು ಇತರ ಅಗತ್ಯತೆಗಳ ನಡುವೆ ಆಹಾರ ಹಾಗೂ  ಇಂಧನದ ತೀವ್ರ ಕೊರತೆಯನ್ನು ಎದುರಿಸುತ್ತಿದೆ.

ಕಳೆದ ವಾರ ಮಾಜಿ ಅಧ್ಯಕ್ಷ ಗೋತಬಯ ರಾಜಪಕ್ಸೆಗೆ ರಾಜೀನಾಮೆ ನೀಡುವಂತೆ ದೇಶದ ಜನರು ಬೀದಿಗಿಳಿದು  ಒತ್ತಾಯಿಸಿದರು.  ರಾಜಪಕ್ಸೆ ಮತ್ತು ಸರಕಾರದಲ್ಲಿದ್ದ ಅವರ ಕುಟುಂಬ ಸದಸ್ಯರು  ದೇಶದ ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.  ಇದು ಈ ದೊಡ್ಡ ಬಿಕ್ಕಟ್ಟಿಗೆ ಕಾರಣವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News