ಬಾಯಾರು | ಡಿವೈಎಫ್ಐ ನೇತೃತ್ವದಲ್ಲಿ 'ಸೆಕ್ಯುಲರ್ ಮಳೆ ಉತ್ಸವ'
Update: 2022-07-20 13:54 IST
ಮಂಜೇಶ್ವರ, ಜು.20: ಆಟದ ಮೈದಾನಗಳನ್ನು ಕೇಸರೀಕರಣಕ್ಕೆದುರಾಗಿ ಡಿವೈಎಫ್ಐ ಮಂಜೇಶ್ವರ ಬ್ಲಾಕ್ ಸಮಿತಿ ನೇತೃತ್ವದಲ್ಲಿ ಬಾಯಾರು ಬಳ್ಳೂರು ಗದೆಯಲ್ಲಿ ಮಳೆ ಉತ್ಸವ ನಡೆಯಿತು.
ಈ ಪರಿಸರದಲ್ಲಿ ಕೆಲದಿನಗಳ ಹಿಂದೆ ವೀರ ಕೇಸರಿ ಕ್ಲಬ್ ನೇತೃತ್ವದಲ್ಲಿ 'ಹಿಂದೂಗಳಿಗೆ ಮಾತ್ರ' ಎಂದು ಘೋಷಣೆಯೊಂದಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಎಲ್ಲಾ ಜವರಿಗಾಗಿ ಆಯೋಜಿಸಿದ್ದ 'ಮಳೆ ಉತ್ಸವ'ವನ್ನು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಳ್ಳತ್ ಉದ್ಘಾಟಿಸಿದರು. ಬ್ಲಾಕ್ ಅಧ್ಯಕ್ಷ ವಿನಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸಹ ಕಾರ್ಯದರ್ಶಿ ಸಾದಿಕ್ ಚೆರುಗೋಳಿ, ಪಂಚಾಯತ್ ಅಧ್ಯಕ್ಷೆ ಜಯಂತಿ ಕೆ., ಅಬ್ದುರ್ರಝಾಕ್ ಚಿಪ್ಪಾರು ಮಾತನಾಡಿ ಶುಭ ಹಾರೈಸಿದರು. ಝಕರಿಯ ಸ್ವಾಗತಿಸಿದರು.