ದಕ್ಷಿಣ ಆಫ್ರಿಕಾದ ಹೊಸ ಟಿ20 ಲೀಗ್‌: ಆರು ತಂಡಗಳನ್ನು ಖರೀದಿಸಿದ ಐಪಿಎಲ್ ಫ್ರಾಂಚೈಸಿಗಳ ಮಾಲಿಕರು

Update: 2022-07-20 11:04 GMT

ಹೊಸದಿಲ್ಲಿ: ಮುಂದಿನ ವರ್ಷ ಜನವರಿಯಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾದ ಹೊಸ ಟಿ20 ಲೀಗ್‌ನಲ್ಲಿ ಆರು ತಂಡಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಫ್ರಾಂಚೈಸಿಗಳ ಮಾಲಿಕರು ಖರೀದಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಆರ್‌ಪಿಎಸ್‌ಜಿ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ಸನ್ ಟಿವಿ ನೆಟ್‌ವರ್ಕ್ ಲಿಮಿಟೆಡ್, ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್, ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಹಾಗೂ  ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಆರು ಫ್ರಾಂಚೈಸಿಗಳಿಗೆ ಬಿಡ್‌ಗಳನ್ನು ಗೆದ್ದುಕೊಂಡವು.

ರಿಲಯನ್ಸ್ ಕಂಪೆನಿಯು ಮುಂಬೈ ಇಂಡಿಯನ್ಸ್ ಮಾಲಿಕತ್ವ ಹೊಂದಿದ್ದರೆ, ಆರ್‌ಪಿಎಸ್‌ಜಿ ಕಂಪೆನಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಮಾಲಿಕತ್ವ ಹೊಂದಿದೆ. ಸನ್ ಟಿವಿ ಕಂಪೆನಿ ಸನ್‌ರೈಸರ್ಸ್ ಹೈದರಾಬಾದ್‌ನ ಮಾಲಿಕನಾಗಿದ್ದರೆ, ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಹಾಗೂ  ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಕ್ರಮವಾಗಿ ರಾಜಸ್ಥಾನ ರಾಯಲ್ಸ್ ಹಾಗೂ  ಡೆಲ್ಲಿ ಕ್ಯಾಪಿಟಲ್ಸ್ ಮಾಲಕತ್ವ ಹೊಂದಿವೆ. ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್ ಸಹಜವಾಗಿ ಸಿಎಸ್ ಕೆ ಮಾಲಕತ್ವ ಹೊಂದಿದೆ.

ಡೆಲಾಯ್ಟ್ ಕಾರ್ಪೊರೇಟ್ ಫೈನಾನ್ಸ್ ನಿರ್ವಹಿಸುವ ಓಪನ್  ಬಿಡ್ ಪ್ರಕ್ರಿಯೆಯು ಪ್ರಪಂಚದಾದ್ಯಂತ ಫ್ರಾಂಚೈಸ್ ಹೊಂದಲು ಆಸಕ್ತಿಯನ್ನು ವ್ಯಕ್ತಪಡಿಸಿದ 29 ಕ್ಕೂ ಹೆಚ್ಚು ಸಂಸ್ಥೆಗಳನ್ನು ಆಕರ್ಷಿಸಿತು ಎಂದು ಹೇಳಿಕೆ ತಿಳಿಸಿದೆ.

ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌  ಫ್ರಾಂಚೈಸಿಯನ್ನು ರಿಲಯನ್ಸ್ ಖರೀದಿಸಿದೆ. ಆರ್ ಪಿ ಎಸ್ ಜಿ ಡರ್ಬನ್‌ನಲ್ಲಿರುವ ಕಿಂಗ್ಸ್‌ಮೀಡ್ ಮೂಲದ ಫ್ರಾಂಚೈಸ್ ಅನ್ನು ಖರೀದಿಸಿದೆ.

ಸನ್ ಟಿವಿ ನೆಟ್‌ವರ್ಕ್‌ನ ಫ್ರಾಂಚೈಸಿಯು ಗ್ಕೆಬರ್ಹಾದ ಸೈಂಟ್ ಜಾರ್ಜ್ ಪಾರ್ಕ್ ತಂಡವನ್ನು ಖರೀದಿಸಿದರೆ,  

ಪಾರ್ಲ್‌ನಲ್ಲಿರುವ ಬೋಲ್ಯಾಂಡ್ ಪಾರ್ಕ್ ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಖರೀದಿಸಿದ ತಂಡಕ್ಕೆ ತವರು ಮೈದಾನವಾಗಿದೆ ಮತ್ತು ಪ್ರಿಟೋರಿಯಾದಲ್ಲಿನ ಸೂಪರ್‌ಸ್ಪೋರ್ಟ್ ಪಾರ್ಕ್ ಜೆಎಸ್ ಡಬ್ಲ್ಯು ಗ್ರೂಪ್‌ನ ತಂಡವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News