ಆಲ್ಟ್‌ನ್ಯೂಸ್‌ ಸಹ-ಸಂಸ್ಥಾಪಕ ಝುಬೈರ್‌ಗೆ ಜಾಮೀನು: ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರಿಂದ ಸ್ವಾಗತ

Update: 2022-07-20 15:06 GMT
ಮುಹಮ್ಮದ್ ಝುಬೈರ್

ಹೊಸದಿಲ್ಲಿ: ಆಲ್ಟ್‌ನ್ಯೂಸ್ ಸಹ-ಸಂಸ್ಥಾಪಕ ಮುಹಮ್ಮದ್ ಝುಬೈರ್ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದ ಕೆಲವೇ ನಿಮಿಷಗಳಲ್ಲಿ, ಟ್ವಿಟರ್ ಬಳಕೆದಾರರು ಪತ್ರಕರ್ತರನ್ನು ದೊಡ್ಡ ಮಟ್ಟದಲ್ಲಿ ಸ್ವಾಗತಿಸಿದ್ದಾರೆ. #MohammedZubair ಮತ್ತು #WelcomeBack ಹ್ಯಾಶ್‌ಟ್ಯಾಗ್‌ಗಳು ಶೀಘ್ರದಲ್ಲೇ ಟ್ವಿಟರಿನಲ್ಲಿ ಟ್ರೆಂಡಿಂಗ್ ಆಗಿವೆ.

ದಿ ವೈರ್‌ನ ಪತ್ರಕರ್ತೆ ಅರ್ಫಾ ಖಾನಮ್ ಟ್ವೀಟ್ ಮಾಡಿ ಝುಬೈರ್ ಅವರನ್ನು ಹೀರೋ ಎಂದು ಕರೆದಿದ್ದಾರೆ. ಮತ್ತೊಬ್ಬ ಖ್ಯಾತ ಪತ್ರಕರ್ತ ರಾಜದೀಪ್ ಸರ್ದೇಸಾಯಿ "ನ್ಯಾಯಾಲಯದ ಆದೇಶವು ಪೊಲೀಸರು ಮತ್ತು ಅವರ ರಾಜಕೀಯ ಯಜಮಾನರಿಗೆ ಬಲವಾದ ಸಂದೇಶವಾಗಿದೆ" ಎಂದು ಹೇಳಿದ್ದಾರೆ.

ಹಲವಾರು ಇತರ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಟ್ವಿಟರ್‌ ಬಳಕೆದಾರರು ಝುಬೈರ್‌ ಅವರ ಬಿಡುಗಡೆಗೆ ಸ್ವಾಗತ ಕೋರಿದ್ದಾರೆ. 

ಇದನ್ನೂ ಓದಿ: ಪತ್ರಕರ್ತನಲ್ಲಿ ಬರೆಯಬೇಡ ಎನ್ನಲು ಸಾಧ್ಯವಿಲ್ಲ-ಝುಬೈರ್‌ ವಿರುದ್ಧ ಉ.ಪ್ರ ಸರ್ಕಾರ ಮಾಡಿದ ಮನವಿ ತಿರಸ್ಕರಿಸಿದ ಸುಪ್ರೀಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News