ರಾಷ್ಟ್ರಪತಿ ಚುನಾವಣೆ: ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುವಿಗೆ ಮೊದಲ ಸುತ್ತಿನಲ್ಲಿ ಮುನ್ನಡೆ

Update: 2022-07-21 10:30 GMT
Photo:PTI

ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮೊದಲ ಸುತ್ತಿನಲ್ಲಿ  ಮುನ್ನಡೆ ಪಡೆದಿದ್ದಾರೆ.

ಸಂಸದರ ಮತ ಮೊದಲಿಗೆ ಎಣಿಕೆಯಾದಾಗ ಎನ್‌ಡಿಎಯ ದ್ರೌಪದಿ ಮುರ್ಮು ಗಮನಾರ್ಹ ಮುನ್ನಡೆ ಪಡೆದರು.

748 ಮಾನ್ಯ ಮತಗಳಲ್ಲಿ ಮುರ್ಮು ಅವರು 540 ಮತ ಪಡೆದರು, ಆದರೆ ಯಶವಂತ್ ಸಿನ್ಹಾ 204 ಮತ ಪಡೆದರು ಎಂದು NDTV ವರದಿ ಮಾಡಿದೆ.

ಸಂಸತ್ ಭವನದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಮತ ಎಣಿಕೆ ಆರಂಭವಾಯಿತು. ಸಂಜೆ 4 ಗಂಟೆಗೆ ಫಲಿತಾಂಶ ಬರುವ ನಿರೀಕ್ಷೆಯಿದೆ. ಬೆಳಗ್ಗೆ 11 ಗಂಟೆಗೆ ಪ್ರಕ್ರಿಯೆ ಆರಂಭಗೊಂಡಿದ್ದು ಮತ  ಎಣಿಕೆ ಆರಂಭಕ್ಕೂ ಮುನ್ನ ಎಲ್ಲ ರಾಜ್ಯಗಳ ಮತಪೆಟ್ಟಿಗೆಗಳನ್ನು ತೆರೆಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News