ಜು.26ರಂದು ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ 'ಮಿಲನೋತ್ಸವ'

Update: 2022-07-21 10:18 GMT

ಮಂಗಳೂರು, ಜು.21: ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಜಿಲ್ಲಾ ಮಟ್ಟದ 'ಮಿಲನೋತ್ಸವ' ಕಾರ್ಯಕ್ರಮ ಮಂಗಳೂರು ಘಟಕದ ಆತಿಥ್ಯದೊಂದಿಗೆ ಜು.26ರಂದು ಬೆಳಗ್ಗೆ 8ರಿಂದ ಸುರತ್ಕಲ್ ರೇಂಜರ್ಸ್ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ. ವಿಟ್ಲ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘವು ಪ್ರಾರಂಭಗೊಂಡು 5 ವರ್ಷವಾಗಿದ್ದು, ಕೆಲವೇ ವರ್ಷಗಳಲ್ಲಿ 500ಕ್ಕೂ ಅಧಿಕ ಸದಸ್ಯರನ್ನೊಳಗೊಂಡಿದೆ. 6 ಸಾವಿರಕ್ಕೂ ಅಧಿಕ ಕಾರ್ಮಿಕರು ಈ ಕ್ಷೇತ್ರದಲ್ಲಿ ದುಡಿಯುತ್ತಿದ್ದು, ಕೋವಿಡ್ ಸಮಯದಲ್ಲೂ ಸಮಾಜದ ಸಂಕಷ್ಟಕ್ಕೆ ಸಂಘ ಸ್ಪಂದಿಸಿದೆ. ಮಿಲನೋತ್ಸವ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಮತ್ತು ಶಾಮಿಯಾನ ಸಂಸ್ಥೆಯ ಕಾರ್ಮಿಕ ವರ್ಗದವರು ಭಾಗವಹಿಸಲಿದ್ದಾರೆ. ಇದೊಂದು ಸ್ಪರ್ಧಾತ್ಮಕ ಹಾಗೂ ಮನೋರಂಜನಾತ್ಮಕ ಕ್ರೀಡಾಕೂಟವಾಗಲಿದೆ ಎಂದರು.

ಕಾರ್ಯಕ್ರಮವನ್ನು ಬೆಳಗ್ಗೆ 8 ಗಂಟೆಗೆ ಉತ್ತರ ಸಂಚಾರಿ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಸುರೇಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ. ವಿಟ್ಲ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯೆ ಸರಿತಾ ಶಶಿಧರ್ ಉಪಸ್ಥಿತರಿರಲಿದ್ದಾರೆ.

ಮಂಗಳೂರು ಘಟಕದ ಅಧ್ಯಕ್ಷ ಕ್ಲೇವರ್ ಡಿಸೋಜ, ಬಂಟ್ವಾಳ ಘಟಕ ಅಧ್ಯಕ್ಷ ಪಿಯುಸ್ ಮ್ಯಾಕ್ಸಿಮ್ ಸಿಕ್ವೇರ, ಮೂಡುಬಿದಿರೆ ಘಟಕ ಅಧ್ಯಕ್ಷ ಗಣೇಶ್ ಕಾಮತ್, ಬೆಳ್ತಂಗಡಿ ಘಟಕ ಅಧ್ಯಕ್ಷ ಜೆರ್ಮಿ ಡೇಸಾ ಉಪಸ್ಥಿತರಿರುವರು.

ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿದ್ದು, ಕಾಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ. ವಿಟ್ಲ ವಹಿಸುವರು.

ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಶಾಸಕ ಡಾ.ವೈ.ಭರತ್ ಶೆಟ್ಟಿ, ಮಿಸ್ಕಿತ್ ಹಾಸ್ಪಿಟಲ್ ಆಡಳಿತ ನಿದೇಶಕ ಡಾ.ಕ್ಲಿರ್ಡ್ ಮಿಸ್ಕಿತ್ ಉಪಸ್ಥಿತರಿರುವರು.

ಮಂಗಳೂರು ಘಟಕದ ನಿಕಟಪೂರ್ವ ಅಧ್ಯಕ್ಷ ಉಮಾನಾಥ್ ಸುವರ್ಣ, ಗೌರವಾಧ್ಯಕ್ಷ ಭಾಸ್ಕರ ರಾವ್ ಗೌರವ ಉಪಸ್ಥಿತರಿರುವರು.

ಬೆಳಗ್ಗಿನಿಂದ ಸಂಜೆಯವರೆಗೆ ನಾನಾ ಸಾಂಸ್ಕೃತಿಕ, ವೈವಿಧ್ಯ ಕಾರ್ಯಕ್ರಮ ಆಟೋಟ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಪ್ರಸಾದ್ ಹೆಗ್ಡೆ ಮಿಜಾರ್, ಮಂಗಳೂರು ಘಟಕ ಕಾರ್ಯದರ್ಶಿ ನಿಶಿತ್ ಪೂಜಾರಿ, ಮಂಗಳೂರು ಘಟಕ ಅಧ್ಯಕ್ಷ ಕ್ಲೇವರ್ ಡಿಸೋಜ, ಮಂಗಳೂರು ಘಟಕದ ಅಧ್ಯಕ್ಷ ಉಮಾನಾಥ್ ಸುವರ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News