ಆವಿಷ್ಕಾರ ಸೂಚ್ಯಂಕ: ಸತತ ಮೂರನೇ ವರ್ಷ ಟಾಪ್ ಸ್ಥಾನದಲ್ಲಿ ಕರ್ನಾಟಕ

Update: 2022-07-21 11:37 GMT

ಹೊಸದಿಲ್ಲಿ: ನೀತಿ ಆಯೋಗ ಹೊರತಂದಿರುವ ಮೂರನೇ ಆವಿಷ್ಕಾರ ಸೂಚ್ಯಂಕದಲ್ಲಿ ಪ್ರಮುಖ ರಾಜ್ಯಗಳ ಪೈಕಿ ಮೊದಲ ಸ್ಥಾನವನ್ನು ಕರ್ನಾಟಕ ಪಡೆದುಕೊಂಡರೆ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಕ್ರಮವಾಗಿ ತೆಲಂಗಾಣ ಮತ್ತು ಹರ್ಯಾಣ ರಾಜ್ಯಗಳು ಪಡೆದಿವೆ. ಕರ್ನಾಟಕ ಸತತ ಮೂರನೇ ಬಾರಿಗೆ ಈ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದಿದೆ.

ನೀತಿ ಆಯೋಗದ ಇಂಡಿಯಾ ಇನ್ನೊವೇಶನ್ ಇಂಡೆಕ್ಸ್ 2021 ರಾಜ್ಯಗಳ ಆವಿಷ್ಕಾರ ಸಾಮಥ್ರ್ಯಗಳು ಮತ್ತು ಪೂರಕ ವ್ಯವಸ್ಥೆಗಳನ್ನು ಪರಾಮರ್ಶಿಸುತ್ತದೆ.

ನೀತಿ ಆಯೋಗದ ಉಪಾಧ್ಯಕ್ಷರಾದ ಸುಮನ್ ಬೆರಿ ಅವರು ಸಿಇಒ ಪರಮೇಶ್ವರನ್ ಐಯ್ಯರ್ ಅವರ ಉಪಸ್ಥಿತಿಯಲ್ಲಿ ಈ ಸೂಚ್ಯಂಕವನ್ನು ಬಿಡುಗಡೆಗೊಳಿಸಿದರು. ಜಾಗತಿಕ ಆವಿಷ್ಕಾರ ಸೂಚ್ಯಂಕದ ಮಾದರಿಯಲ್ಲಿಯೇ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ.

ಈ ಸೂಚ್ಯಂಕಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು 17 ಪ್ರಮುಖ ರಾಜ್ಯಗಳು, 10 ಈಶಾನ್ಯ ಮತ್ತು ಗುಡ್ಡಪ್ರದೇಶದ ರಾಜ್ಯಗಳು ಹಾಗೂ 9 ಕೇಂದ್ರಾಡಳಿತ ಪ್ರದೇಶಗಳು ಎಂಬ ವಿಭಾಗಗಳನ್ನು ಮಾಡಲಾಗಿತ್ತು.

ಪ್ರಮುಖ ರಾಜ್ಯಗಳ ಪೈಕಿ ಕೊನೆಯ ಸ್ಥಾನಗಳಲ್ಲಿ ಛತ್ತೀಸಗಢ, ಒಡಿಶಾ ಮತ್ತು ಬಿಹಾರ ಇವೆ.

ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡೀಗಢ ಪ್ರಥಮ ಸ್ಥಾನ ಪಡೆದರೆ ಈಶಾನ್ಯ ರಾಜ್ಯಗಳ ಪೈಕಿ ಮಣಿಪುರ ಮೊದಲ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News