ಯುಎಇ ರಾಷ್ಟ್ರೀಯ ಮಟ್ಟದ ಗಲ್ಫ್ ಇಶಾರ ಚಂದಾ ಅಭಿಯಾನ 2022ಕ್ಕೆ ಚಾಲನೆ

Update: 2022-07-22 04:38 GMT

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಯು.ಎ.ಇ. ಇದರ  ಗಲ್ಫ್ ಇಶಾರ ಚಂದಾ ಅಭಿಯಾನ 2022 ರ ಉದ್ಘಾಟನಾ  ಕಾರ್ಯಕ್ರಮವು ಝೈನುದ್ದೀನ್ ಹಾಜಿ ಬೆಳ್ಳಾರೆ ಅಧ್ಯಕ್ಷತೆಯಲ್ಲಿ ದುಬೈಯಲ್ಲಿ ಇತ್ತೀಚೆಗೆ ನಡೆಯಿತು.

ಪ್ರಸ್ತುತ ವರ್ಷದ ಚಂದಾಭಿಯಾನವನ್ನು ಅಶ್ರಫ್ ಹಾಜಿ ಅಡ್ಯಾರ್ ಉದ್ಘಾಟಿಸಿ ಅಭಿಯಾನಕ್ಕೆ ಶುಭಹಾರೈಸಿದರು. ಈ ವರ್ಷದ ಗಲ್ಫ್ ಇಶಾರ ಚಂದಾಭಿಯಾನವು  ಜುಲೈ 16 ರಿಂದ ಆಗಸ್ಟ್ 31 ರ ವರೆಗೆ ನಡೆಯಲಿದ್ದು ಅಭಿಯಾನದ ಯಶಸ್ವಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ  ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಝೈನುದ್ದೀನ್ ಹಾಜಿ ಬೆಳ್ಳಾರೆ, ಸಂಚಾಲಕರಾಗಿ ಅಕ್ರಮ್ ಬಿ.ಸಿ. ರೋಡ್, ಕೋಶಾಧಿಕಾರಿಯಾಗಿ ಕೆ. ಎಚ್. ಮುಹಮ್ಮದ್ ಸಖಾಫಿ, IT ಸಂಯೋಜಕರಾಗಿ ಯುಟಿ ನೌಶಾದ್ ರವರನ್ನು ನೇಮಕ ಮಾಡಲಾಯಿತು. 

ಸಮಿತಿ ಸದಸ್ಯರಾಗಿ ಅಬ್ದುಲ್ ರಝಾಕ್ ಸಅದಿ ಅಬುಧಾಬಿ, ಶಾದುಲಿ ಶಾರ್ಜಾ ವೆಸ್ಟ್, ಅಲಿ ಕನ್ಯಾನ ದುಬೈ ಸೌತ್, ರಝಾಕ್ ಕಾಜೂರ್ ರಾಸ್ ಅಲ್ ಖೈಮ, ರಿಫಾಯ್ ಗೂನಡ್ಕ ದುಬೈ ನಾರ್ತ್, ಸಿದ್ದೀಕ್ ಅಜ್ಮಾನ್, ಅನ್ಸಾರ್ ಸಾಲೆತ್ತೂರು ಶಾರ್ಜಾ ಈಸ್ಟ್, ಅಬ್ದುಲ್ ರಹೀಂ ಅಲ್ ಐನ್ ರವರನ್ನು ಆರಿಸಲಾಯಿತು. 

ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಕೌನ್ಸಿಲ್ ನೇತಾರರಾದ ಪಿಎಂಎಚ್‌ ಅಬ್ದುಲ್ ಹಮೀದ್, ಉಸ್ಮಾನ್ ಹಾಜಿ, ರಾಷ್ಟ್ರೀಯ ಸಮಿತಿಯ ಹಾಗೂ ಝೋನ್ ಸಮಿತಿಯ ನೇತಾರರು ಪಾಲ್ಗೊಂಡಿದ್ದರು.

ರಾಷ್ಟ್ರೀಯ ಸಮಿತಿಯ ಪಬ್ಲಿಕೇಶನ್ ವಿಭಾಗದ ಅಧೀನದಲ್ಲಿ ನಡೆಯುವ ಗಲ್ಫ್ ಇಶಾರ  ಚಂದಾ ಅಭಿಯಾನವನ್ನು ಯಶಸ್ವಿಗೊಳಿಸಲು ಝೋನ್, ಸೆಕ್ಟರ್ ಹಾಗೂ ಯೂನಿಟ್ ನಾಯಕರು ಗಳಿಗೆ ಕರೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News