ಕೇರಳದಲ್ಲಿ ಮೂರನೇ ಮಂಕಿಪಾಕ್ಸ್‌ ಪ್ರಕರಣ ಪತ್ತೆ

Update: 2022-07-22 10:11 GMT

ತಿರುವನಂತಪುರಂ: ಈ ತಿಂಗಳ ಆರಂಭದಲ್ಲಿ ಯುಎಇಯಿಂದ ಕೇರಳಕ್ಕೆ ಬಂದಿದ್ದ 35 ವರ್ಷದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ಪಾಸಿಟಿವ್‌ ಕಂಡುಬಂದಿದ್ದು, ಈ ಮೂಲಕ ದೇಶದಲ್ಲಿ ಮತ್ತು ಕೇರಳ ರಾಜ್ಯದಲ್ಲಿ ಮೂರನೇ ಮಂಕಿಪಾಕ್ಸ್‌ ಪ್ರಕರಣ ವರದಿಯಾಗಿದೆ.

ಮಲಪ್ಪುರಂ ಮೂಲದ ವ್ಯಕ್ತಿ ಜುಲೈ 6ರಂದು ಯುಎಇಯಿಂದ ಕೇರಳಕ್ಕೆ ಆಗಮಿಸಿದ್ದು, ಇದೀಗ ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ. ರೋಗಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News