ಭಟ್ಕಳ: ಪಡಿತರ ಅಕ್ಕಿ ಅಕ್ರಮ ದಾಸ್ತಾನು ಪತ್ತೆ

Update: 2022-07-23 07:31 GMT

ಭಟ್ಕಳ: ಕಡಸಲಗದ್ದೆಯ ಖಾಸಗಿ ಕಟ್ಟಡವೊಂದರಲ್ಲಿ ಸುಮಾರು 940 ಚೀಲ ಪಡಿತರ ಅಕ್ಕಿ ಅಕ್ರಮ ದಾಸ್ತಾನು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ತಹಶೀಲ್ದಾರ್, ಆಹಾರ ನಿರೀಕ್ಷಕ ಹಾಗೂ ಕಂದಾಯ ಸಿಬ್ಬಂದಿ ದಾಳಿ ನಡೆಸಿದ್ದು ಖಾಸಗಿ ಗೋಡೌನ್‌ನಲ್ಲಿ ಅಕ್ಕಿ ಪತ್ತೆಯಾಗಿದೆ.  ಚೀಲವನ್ನು ಬೇರ್ಪಡಿಸಿ ಹೊಲಿಯುವ ಯಂತ್ರ, ತೂಕದ ಯಂತ್ರ,  ಖಾಲಿ ಚೀಲಗಳು ಹಾಗೂ ಇತರೆ ಸಾಮಗ್ರಿಗಳು ಕೂಡಾ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News