ಪಾಕಿಸ್ತಾನ: ಪ್ರವಾಹದಲ್ಲಿ ಕೊಚ್ಚಿಹೋದ 50 ಮನೆಗಳು

Update: 2022-07-25 16:57 GMT

ಇಸ್ಲಾಮಾಬಾದ್ (ಪಾಕಿಸ್ತಾನ), ಜು. 25: ಪಾಕಿಸ್ತಾನದ ಕೊಹಿಸ್ತಾನ್ನಲ್ಲಿ ರವಿವಾರ ದಿಢೀರ್ ಪ್ರವಾಹ ತಲೆದೋರಿದ್ದು, ಕನಿಷ್ಠ 50 ಮನೆಗಳು ಮತ್ತು ವಿದ್ಯುತ್ ಸ್ಥಾವರಗಳು ಕೊಚ್ಚಿಹೋಗಿವೆ.

ಮೇಲಿನ ಕೊಹಿಸ್ತಾನ್ನ ಕಾಂಡಿಯ ತಾಲೂಕಿನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಿಢೀರ್ ಪ್ರವಾಹ ತಲೆದೋರಿದೆ. ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ನಾಶ ಮತ್ತು ನಷ್ಟ ಸಂಭವಿಸಿದೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಚಿತ್ರಾಲ್ ಮತ್ತು ಪೇಶಾವರದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಅಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪ್ರಾಧಿಕಾರ ತಿಳಿಸಿದೆ.

ಮೇಲಿನ ಕೊಹಿಸ್ತಾನ್ನಲ್ಲಿ ಸುಮಾರು 50 ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ ಎಂದು ತಹಸೀಲ್ದಾರ್ ಮುಹಮ್ಮದ್ ರಿಯಾಝ್ ‘ಡಾನ್’ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News