ಲುಫ್ತಾಂಸಾ ಸಿಬ್ಬಂದಿ ಮುಷ್ಕರ: 1000 ವಿಮಾನ ಹಾರಾಟ ರದ್ದು

Update: 2022-07-26 17:30 GMT

ಬರ್ಲಿನ್, ಜು.26: ಜರ್ಮನಿಯ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಡಾಯ್ಚೆ ಲುಫ್ತಾಂಸಾದ ಗ್ರೌಂಡ್ ಸ್ಟಾಫ್ ಗಳು ಬುಧವಾರ ಮುಷ್ಕರ ಘೋಷಿಸಿರುವ ಹಿನ್ನೆಲೆಯಲ್ಲಿ ಸಂಸ್ಥೆಯ 1000ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ಮಂಗಳವಾರ ರದ್ದುಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಫ್ರಾಂಕ್ಫರ್ಟ್ ಪ್ರಾಂತದಿಂದ ಹೊರಡುವ 678 ವಿಮಾನ ಹಾರಾಟ, ಮ್ಯೂನಿಚ್ನಿಂದ ಹೊರಡುವ 345 ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇದರಿಂದ ವಿಮಾನ ನಿಲ್ದಾಣಗಳಲ್ಲಿ ವಿಪರೀತ ಜನಗಂಗುಳಿ ಸೇರಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರದಿಂದ 1,30,000 ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.

ಗುರುವಾರ ಮತ್ತು ಶುಕ್ರವಾರವೂ ಕೆಲವು ವಿಮಾನ ಸಂಚಾರ ರದ್ದಾಗುವ ಸಾಧ್ಯತೆಯಿದೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News