×
Ad

ಪ್ರವೀಣ್ ನೆಟ್ಟಾರು ಹತ್ಯೆ; ಎನ್‌ಐಎ ತನಿಖೆ ಕೋರಿ ಅಮಿತ್ ಶಾಗೆ ಸಚಿವೆ ಶೋಭಾ ಕರಂದ್ಲಾಜೆ ಪತ್ರ

Update: 2022-07-27 21:19 IST
ಶೋಭಾ ಕರಂದ್ಲಾಜೆ

ಉಡುಪಿ : ಸಂಘ ಪರಿವಾರದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸುವಂತೆ ಕೋರಿ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಪ್ರತ್ಯಕ್ಷದರ್ಶಿಗಳು ಹೇಳುವಂತೆ ಕೊಲೆಗಾರರು ಕೇರಳ ರಿಜಿಸ್ಟರ್ ನಂಬರ್ ಹೊಂದಿರುವ ಬೈಕ್‌ಗಳಲ್ಲಿ ಬಂದಿರುವುದರಿಂದ ಅವರು ಕೇರಳದಿಂದ ಬಂದಿರಬೇಕು ಎಂಬ ಶಂಕೆ ಇದೆ. ಸಮಾಜದ ಕೋಮು ಸೌಹಾರ್ದತೆಯನ್ನು ಕೆಡಿಸಲು ಪಿಎಫ್‌ಐ, ಎಸ್‌ಡಿಪಿಐನಂಥ ಗ್ರೂಪ್‌ಗಳು ಇದರ ಹಿಂದೆ ಇರುವ ಸಾಧ್ಯತೆ ಇದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News