ಪ್ರವೀಣ್ ನೆಟ್ಟಾರು ಹತ್ಯೆ: ಕೋಟ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷ ರಾಜೀನಾಮೆ
Update: 2022-07-27 21:31 IST
ಉಡುಪಿ, ಜು.27: ಸುಳ್ಯದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ವಿಚಾರದಲ್ಲಿ ನೊಂದ ಬಿಜೆಪಿ ಕೋಟ ಯುವ ಮೊರ್ಚ ಅಧ್ಯಕ್ಷ ಸುಶಾಂತ್ ಶೆಟ್ಟಿ ತನ್ನ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ ಪ್ರಕಟಣೆ ನೀಡಿದ್ದಾರೆ.
ಪಕ್ಷ ಹಾಗೂ ಸಂಘಟನೆಗಾಗಿ ಕೆಲಸ ಮಾಡುತ್ತಿರುವರನ್ನು ಕೊಲೆ ಮಾಡುತ್ತಿದ್ದರೂ ಕೂಡ ರಾಜ್ಯ ಹಾಗೂ ಕೇಂದ್ರ ಸರಕಾರ ಯಾವುದೇ ಕ್ರಮ ಜರಗಿಸುತ್ತಿಲ್ಲ. ರಾಜ್ಯ ಸರಕಾರ ಕಠಿಣ ಕ್ರಮ ಎಂಬ ಪೊಳ್ಳು ಭರವಸೆ ನೀಡಿ ಆರೋಪಿಗಳನ್ನು ಬಂಧಿಸಿದಂತೆ ಮಾಡಿದರೂ ಕೂಡ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ. ಈ ವಿಚಾರದಲ್ಲಿ ನಿರಂತರವಾಗಿ ನೋವು ಪಡುತ್ತಿದ್ದೇವೆ. ಅದಕ್ಕಾಗಿ ಈ ರಾಜೀನಾಮೆ ತೀರ್ಮಾನ ಎಂದು ಅವರು ಹೇಳಿದ್ದಾರೆ.