×
Ad

ಯುಎಇ ಕರೆನ್ಸಿ ಎದುರು ಕುಸಿದ ರೂಪಾಯಿ ಮೌಲ್ಯ

Update: 2022-07-27 22:26 IST

 ವಾಷಿಂಗ್ಟನ್, ಜು.27: ಭಾರತದ ರೂಪಾಯಿಯ ಮೌಲ್ಯವು ಬುಧವಾರ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ಮತ್ತು ಯುಎಇಯ ದಿರ್ಹಾಮ್ ಎದುರು ತೀವ್ರ ಅಪಮೌಲ್ಯಗೊಂಡಿದೆ ಎಂದು ವರದಿಯಾಗಿದೆ. 

ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ 10 ಪೈಸೆ ಕುಸಿತ ದಾಖಲಿಸಿ 79.88ಕ್ಕೆ ಇಳಿದರೆ, ದಿರ್ಹಾಮ್ ಎದುರು 21.76ಕ್ಕೆ ಕುಸಿದಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ ಡಾಲರ್ನ ಬಲಿಷ್ಟತೆ ಮತ್ತು ಕಚ್ಛಾ ತೈಲದ ದರದಲ್ಲಿ ಸ್ಥಿರತೆಯು ಇದಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಭಾರತೀಯ ಅಂತರ್ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ಅಮೆರಿಕದ ಡಾಲರ್ನಲ್ಲಿ 79.83ರಲ್ಲಿ ವಹಿವಾಟು ಆರಂಭಿಸಿದ ರೂಪಾಯಿ ಬಳಿಕ 79.88ಕ್ಕೆ ಕುಸಿದಿದೆ. ಮಂಗಳವಾರದ ಅಂತ್ಯದಲ್ಲಿ ರೂಪಾಯಿ ಮೌಲ್ಯ 79.78ರಲ್ಲಿತ್ತು. ಡಾಲರ್ ಸೂಚ್ಯಾಂಕದಲ್ಲಿ ಡಾಲರ್ ಮೌಲ್ಯವೂ 0.16% ಇಳಿಕೆಯಾಗಿದ್ದು 107.02ಕ್ಕೆ ತಲುಪಿದೆ. ಜಾಗತಿಕ ತೈಲ ಬೆಂಚ್ಮಾರ್ಕ್ ಬ್ರೆಂಟ್ ಕಚ್ಛಾತೈಲದ ಸೂಚ್ಯಾಂಕದಲ್ಲಿ 0.13% ಹೆಚ್ಚಳ ದಾಖಲಾಗಿದ್ದು ಬ್ಯಾರೆಲ್ಗೆ 104.54 ಡಾಲರ್ಗೆ ತಲುಪಿದೆ.

ಮಂಗಳವಾರ ವಹಿವಾಟು ಅಂತ್ಯದಲ್ಲಿ ಡಾಲರ್ ನ ಮೌಲ್ಯ, ಹೆಚ್ಚಿನ ತೈಲ ಬೆಲೆಗಳು ಮತ್ತು ತಿಂಗಳು ಅಂತ್ಯದ ಆಮದುದಾರರಿಂದ ಡಾಲರ್ ಗೆ ಹೆಚ್ಚಿದ ಬೇಡಿಕೆ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ಹೇಳಿದ್ದಾರೆ.
  
ಭಾರತದ ಶೇರು ಮಾರ್ಕೆಟ್‌ನಲ್ಲೂ ಸೆನ್ಸೆಕ್ಸ್  49.34 ಅಂಕಗಳನ್ನು ಕಳೆದುಕೊಂಡು 55,219.15 ಅಂಕಗಳಿಗೆ ಮತ್ತು ಎನ್ಎಸ್ಇ ನಿಫ್ಟಿ 21.90 ಅಂಕಗಳನ್ನು ಕಳೆದುಕೊಂಡು 16,461.95 ಅಂಕಕ್ಕೆ ತಲುಪಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News