×
Ad

ಅಶಿಸ್ತಿನ ವರ್ತನೆ: ರಾಜ್ಯಸಭೆಯಲ್ಲಿ ಮೂವರು ಪ್ರತಿಪಕ್ಷ ಸಂಸದರು ಶುಕ್ರವಾರದವರೆಗೆ ಅಮಾನತು

Update: 2022-07-28 14:45 IST
Photo:PTI

ಹೊಸದಿಲ್ಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ "ಅಶಿಸ್ತಿನ ವರ್ತನೆ"ಗಾಗಿ ರಾಜ್ಯಸಭೆಯು ಗುರುವಾರ ಮತ್ತೆ ಮೂವರು ಪ್ರತಿಪಕ್ಷಗಳ ಸಂಸದರನ್ನು ಶುಕ್ರವಾರದವರೆಗೆ ಅಮಾನತುಗೊಳಿಸಿದೆ.

ಮೂರು ಅಮಾನತುಗೊಂಡಿರುವ ರಾಜ್ಯಸಭಾ ಸಂಸದರಲ್ಲಿ ಅಜಿತ್ ಕುಮಾರ್ ಭುಯಾನ್ ಹಾಗೂ ಎಎಪಿಯ ಸುಶೀಲ್ ಕುಮಾರ್ ಗುಪ್ತಾ ಮತ್ತು ಸಂದೀಪ್ ಪಾಠಕ್ ಸೇರಿದ್ದಾರೆ.

ಮಂಗಳವಾರ (ಜುಲೈ 26) ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸದನದ ಬಾವಿಗೆ ನುಗ್ಗಿ ಘೋಷಣೆಗಳನ್ನು ಕೂಗುವ ಮೂಲಕ "ಅಶಿಸ್ತಿನಿಂದ ವರ್ತಿಸಿದ್ದಕ್ಕಾಗಿ  19 ಪ್ರತಿಪಕ್ಷ ಸಂಸದರನ್ನು ಶುಕ್ರವಾರದವರೆಗೆ ಸದನ ಅಮಾನತುಗೊಳಿಸಿದೆ.

ಅಮಾನತುಗೊಂಡ ಸಂಸದರು ಸದನದಿಂದ ಹೊರಬರದ ಕಾರಣ ಹಾಗೂ  ಬೆಲೆ ಏರಿಕೆ ಮತ್ತು ಹಣದುಬ್ಬರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದರಿಂದ ಮೇಲ್ಮನೆಯನ್ನು 60 ನಿಮಿಷಗಳ ಕಾಲ ಮುಂದೂಡಲಾಯಿತು.

ಮಂಗಳವಾರ ಅಮಾನತುಗೊಂಡಿರುವ ಸಂಸದರು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ. ಇದುವರೆಗೆ 23 ರಾಜ್ಯಸಭಾ ಸಂಸದರನ್ನು ಅಮಾನತು ಮಾಡಲಾಗಿದೆ.

ಏತನ್ಮಧ್ಯೆ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಗುರುವಾರ ರಾಷ್ಟ್ರಾಧ್ಯಕ್ಷೆ  ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಉಲ್ಲೇಖಿಸಿದ ನಂತರ ಗೊಂದಲವು ಉಂಟಾಯಿತು.   ಮುರ್ಮು ಅವರನ್ನು ಕಾಂಗ್ರೆಸ್ ಅಧ್ಯಕ್ಷರು ಅವಮಾನಿಸಿದ್ದಾರೆ  ಎಂದು ಬಿಜೆಪಿ ಆರೋಪಿಸಿದೆ. ಪ್ರತಿಪಕ್ಷ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News