"ನನ್ನೊಂದಿಗೆ ಮಾತನಾಡಬೇಡ": ಸ್ಮೃತಿ ಇರಾನಿಗೆ ಸೋನಿಯಾ ಗಾಂಧಿ ತಿರುಗೇಟು

Update: 2022-07-28 09:41 GMT
Photo:PTI

ಹೊಸದಿಲ್ಲಿ: "ನನ್ನೊಂದಿಗೆ ಮಾತನಾಡಬೇಡ" ಎಂದು ಕಾಂಗ್ರೆಸ್ ಅಧ್ಯಕ್ಷೆ ಲೋಕಸಭೆಯಲ್ಲಿ ಸಚಿವೆ ಸ್ಮೃತಿ ಇರಾನಿಗೆ ತಿರುಗೇಟು ನೀಡಿದ ಪ್ರಸಂಗ ಗುರುವಾರ ನಡೆದಿದೆ. 

 ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ  ರಾಷ್ಟ್ರಪತಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದಾರೆಂದು ಬಿಜೆಪಿ ಗದ್ದಲ ಎಬ್ಬಿಸಿದ್ದರಿಂದ ಲೋಕಸಭೆ ಸ್ಪೀಕರ್ ಸದನವನ್ನು ಮುಂದೂಡಿದರು. ಆ ನಂತರ  ಸೋನಿಯಾ ಗಾಂಧಿ ಅವರು ಘೋಷಣೆ ಕೂಗುತ್ತಿದ್ದ  ಬಿಜೆಪಿ ಸಂಸದರ ಬಳಿಗೆ ಹೋಗಲು ನಿರ್ಧರಿಸಿದರು. ಸೋನಿಯ ಗಾಂಧಿ ಅವರೊಂದಿಗೆ. ಇಬ್ಬರು ಕಾಂಗ್ರೆಸ್ ಸಂಸದರು ಇದ್ದರು.

ಆಶ್ಚರ್ಯಕರವಾದ ನಡೆಯಲ್ಲಿ, ಕಾಂಗ್ರೆಸ್ ಅಧ್ಯಕ್ಷರು ಬಿಜೆಪಿ ಸಂಸದೆ ರಮಾ ದೇವಿ ಅವರ ಬಳಿ ತೆರಳಿ: "ಅಧೀರ್ ರಂಜನ್ ಚೌಧುರಿ ಈಗಾಗಲೇ ಕ್ಷಮೆಯಾಚಿಸಿದ್ದಾರೆ. ನನ್ನನ್ನು ಏಕೆ  ಈ ವಿಚಾರದಲ್ಲಿ  ಎಳೆದು ತರಲಾಗುತ್ತಿದೆ?"ಎಂದು ಪ್ರಶ್ನಿಸಿದರು. 

ಆಗ ಸಚಿವೆ ಸ್ಮೃತಿ ಇರಾನಿ ಅವರು ಮಧ್ಯಪ್ರವೇಶಿಸಿ, "ಮೇಡಂ, ನಾನು ನಿಮಗೆ ಸಹಾಯ ಮಾಡಬಹುದೇ? ನಾನು ನಿಮ್ಮ ಹೆಸರನ್ನು ಎತ್ತಿದ್ದೇನೆ" ಎಂದು ಹೇಳಿದರು.
ಅದಕ್ಕೆ ಸೋನಿಯಾ ಗಾಂಧಿ, "ನನ್ನೊಂದಿಗೆ ಮಾತನಾಡಬೇಡ" ಎಂದು ತಿರುಗೇಟು ನೀಡಿದರು.

ಆಡಳಿತಾರೂಢ ಬಿಜೆಪಿ ಸದಸ್ಯರು ಗಲಾಟೆ ಎಬ್ಬಿಸಿದ್ದು,, ಪ್ರತಿಪಕ್ಷ ಸದಸ್ಯರು ಪ್ರತಿ ದಾಳಿ ನಡೆಸಿದರು.
ತೃಣಮೂಲ ಕಾಂಗ್ರೆಸ್ ಸಂಸದರು ಹಾಗೂ ಎನ್ಸಿಪಿಯ ಸುಪ್ರಿಯಾ ಸುಳೆ ಅವರು  ಘೋಷಣೆ ಕೂಗುತ್ತಿದ್ದ ಬಿಜೆಪಿ ಸದಸ್ಯರಿಂದ ಸೋನಿಯಾ ಗಾಂಧಿ ಅವರನ್ನು ದೂರ ಸೆಳೆದರು. 
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನಂತರ ಪರಿಸ್ಥಿತಿಯನ್ನು ಶಾಂತಗೊಳಿಸಲು ಮುಂದಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News