ಯುವರಾಜ ಫಿಲಿಪ್‌ ಉಯಿಲು ಪ್ರಕರಣ: ದಿ ಗಾರ್ಡಿಯನ್‌ ಅರ್ಜಿ ತಿರಸ್ಕೃತ

Update: 2022-07-29 15:57 GMT

 ಲಂಡನ್,ಜು.29: ಯುವರಾಜ ಫಿಲಿಪ್ ನ ಉಯಿಲಿ (ವಿಲ್)ನ ಕುರಿತಾ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ನಡೆದ  ವಿಚಾರಣೆಯ ಕಲಾಪದಲ್ಲಿ ಮಾಧ್ಯಮಗಳಿಗೆ ಪ್ರವೇಶಾನುಮತಿ ನಿರಾಕರಿಸಿದ್ದ ಆದೇಶವನ್ನು ಪ್ರಶ್ನಿಸಿ ತಾನು ಸಲ್ಲಿಸಿದ ಅರ್ಜಿಯು ತಿರಸ್ಕೃತಗೊಂಡಿದೆಯೆಂದು ’ದಿ ಗಾರ್ಡಿಯನ್’ ದಿನ ಪತ್ರಿಕೆ ಶುಕ್ರವಾರ ತಿಳಿಸಿದೆ.

     

ರಾಜಕುಮಾರ ವಿಲಿಯಂ ಅವರ ವಿಧವಾಪತ್ನಿ ಎರಡನೆ ಎಲಿಜಬೆತ್ ಹಾಗೂ ಇತರ ಬ್ರಿಟಿಶ್ ರಾಜವಂಶಸ್ಥರ ಖಾಸಗಿತನವನ್ನು ರಕ್ಷಿಸುವ ಉದ್ದೇಶದಿಂದ ಈ ಉಯಿಲನ್ನು 90 ವರ್ಷಗಳ ಕಾಲ ಮೊಹರು ಮಾಡಿಡಬೇಕೆಂದು ಹೈಕೋರ್ಟ್ ನ್ಯಾಯಾಧೀಶರು 2021ರ ಸೆಪ್ಟೆಂಬರ್ನಲ್ಲಿ ನೀಡಿದ ತೀರ್ಪಿನಲ್ಲಿ ತಿಳಿಸಿತ್ತು.ಈ ವಿಚಾರಣಾ ಕಲಾಪವನ್ನು ರಹಸ್ಯವಾಗಿ ನಡೆಸಲಾಗಿದ್ದು, ಮಾಧ್ಯಮಗಳಿಗೆ ಇದರಲ್ಲಿ ಭಾಗವಹಿಸಲು ಅನುಮತಿಯನ್ನು ನೀಡಿರಲಿಲ್ಲ.

ಇದನ್ನು ಪ್ರಶ್ನಿಸಿ ‘ದಿ ಗಾರ್ಡಿಯನ್’ ಪತ್ರಿಕೆಯು, ಸರಕಾರದ ಮುಖ್ಯ ಕಾನೂನು ಅಧಿಕಾರಿಯಾದ ಅಟಾರ್ನಿ ಜನರಲ್ ಹಾಗೂ ಬ್ರಿಟಿಶ್ ರಾಣಿಯ ಖಾಸಗಿ ವಕೀಲರ ವಿರುದ್ಧ ನ್ಯಾಯಾಲಯದ ಮೆಟ್ಟಲೇರಿತ್ತು ಹಾಗೂ ವಿಚಾರಣಾ ಕಲಾಪದಲ್ಲಿ ಮಾಧ್ಯಮಗಳಿಗೆ ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ಆಗ್ರಹಿಸಿತ್ತು.

ಆದರೆ ನ್ಯಾಯಾಲಯದ ಅರ್ಜಿಯನ್ನು ತಿರಸ್ಕರಿಸಿದ ಹಿರಿಯ ನ್ಯಾಯಾಧೀಶರಾದ ಜೆಫ್ರಿ ವಾಸ್ ಹಾಗೂ ವಿಕ್ಟೋರಿಯಾ ಶಾರ್ಪ್ ಅವರು, ವಿಚಾರಣಾ ಕಲಾಪದ ವೀಕ್ಷಣೆಗೆ ಮಾಧ್ಯಮಗಳಿಗೆ ಅವಕಾಶ ನೀಡುವುದರಿಂದ ಸಾರ್ವಜನಿಕವಾಗಿ ಸಂಚಲನ ಹಾಗೂ ಕೋಲಾಹಲ ಸೃಷ್ಟಿಯಾಗಲಿದೆ ಎಂದು ಅಭಿಪ್ರಾಯಿಸಿದರು.

ಕೆಲವು ಪ್ರಕರಣಗಳಲ್ಲಿ ಉಯಿಲು ಹಾಗೂ ಅದರ ಮೌಲ್ಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದೆ ಇರುವುದಕ್ಕೆ ಬ್ರಿಟಿಶ್ ಕಾನೂನು ಅನುಮತಿ ನೀಡುತ್ತದೆ ಎಂದು ನ್ಯಾಯಾಧೀಶರು ತಿಳಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದ ಸನ್ನಿವೇಶಗಳು ಅಸಾಧಾರಣವಾದುದಾಗಿದೆ ಎಂದವರು ಅಭಿಪ್ರಾಯಿಸಿದ್ದರು.

ಡ್ಯೂಕ್ ಆಫ್ ಎಡಿನ್ಬರ್ಗ್ ಎಂಬುದಾಗಿಯೂ ಕರೆಯಲ್ಪಡುವ ರಾಜಕುಮಾರ ಫಿಲಿಪ್ ಅವರು ಒಂದು ತಿಂಗಳಿಗೂ ಅಧಿಕ ಸಮಯದ ಅಸ್ವಸ್ಥತೆಯ ಬಳಿಕ ಕಳೆದ ವರ್ಷದ ಎಪ್ರಿಲ್ನಲ್ಲಿ ಮೃತಪಟ್ಟರು. ಅವರು 100ನೇ ಹುಟ್ಟುಹಬ್ಬಕ್ಕೆ ಕೆಲವೇ ವಾರಗಳ ಮೊದಲು ಅವರು ಕೊನೆಯುಸಿರೆಳೆದಿದ್ದರು.

ಫಿಲಿಪ್ ಹಾಗೂ ರಾಣಿ ಎಲಿಝಬೆತ್ ಅವರು 73 ವರ್ಷಗಳ ಹಿಂದೆ ವಿವಾಹವಾಗಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News