1870 ಹಾಗೂ 1996ರ ನಡುವೆ ಕೆನಡದ ಮಿಶನರಿ ಶಾಲೆಗಳಲ್ಲಿ ಮೂಲನಿವಾಸಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹಗರಣ

Update: 2022-07-29 16:22 GMT

ಸೈಂಟೆ ಆ್ಯನ್ನೆ ಡೆ ಬಿಯಾಪರ್,ಜು.29: ಕೆನಡದ ಮೂಲನಿವಾಸಿ ಬುಡಕಟ್ಟುಗಳ ಮಕ್ಕಳ ಮೇಲೆ ಕೆಥೋಲಿಕ್ ಪಾದ್ರಿಗಳು ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳಿಗಾಗಿ ಕ್ಷಮೆಯಾಚಿಸುವಂತೆ ಪೋಪ್ ಫ್ರಾನ್ಸಿಸ್ ಅವರು ಗುರುವಾರ ಕ್ಷಮೆಯಾಚನೆ ಮಾಡಿದ್ದಾರೆ.

  

ಕೆನಡದ ಕ್ಯೂಬೆಕ್ ನಗರದ ಕೆಥೆಡ್ರಲ್ ಒಂದರಲ್ಲಿ ಗುರುವಾರ ಸಂಜೆ ಕ್ರೈಸ್ತಧರ್ಮಗುರುಗಳು ಹಾಗೂ ಸನ್ಯಾಸಿನಿಯರ ಜೊತೆ ನಡೆಸಿದ ಪ್ರಾರ್ಥನಾಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಪೋಪ್ ಅವರು, ತನ್ನ ಕೆಲವು ಪುತ್ರರು ಹಾಗೂ ಪುತ್ರಿಯರು ಎಸಗಿದ ದುಷ್ಕೃತ್ಯದಿಂದ ಆಘಾತಕ್ಕೀಡಾದ ಕೆನಡಾದ ಚರ್ಚ್ ವ್ಯವಸ್ಥೆಯು, ಈಗ ಹೊಸ ಹಾದಿಯತ್ತ ಸಾಗುತ್ತಿದೆ ಎಂದರು.

ಅಪ್ರಾಪ್ತರು ಹಾಗೂ ದುರ್ಬಲರ ಮೇಲಿನ ಲೈಂಗಿಕ ದೌರ್ಜನ್ಯಗಳು ಹಾಗೂ ಹಗರಣಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕಾದ ಅಗತ್ಯವಿದೆಯೆಂದು ಪೋಪ್ ಅವರು ತಿಳಿಸಿದ್ದಾರೆ. ದಶಕಗಳ ಹಿಂದೆ ಕೆನಡದ ಬುಡಕಟ್ಟು ಮೂಲನಿವಾಸಿಗಳ ಮಕ್ಕಳಿಗಾಗಿನ ವಸತಿ ಶಾಲೆಗಳಲ್ಲಿ , ಅಪ್ರಾಪ್ತ ವಯಸ್ಕರ ಮೇಲೆ ಕ್ರೈಸ್ತ ಮಿಶನರಿಗಳು ಎಸಗಿದ ಲೈಂಗಿಕ ದೌರ್ಜನ್ಯಗಳಿಗಾಗಿ ಕ್ಷಮೆಯಾಚಿಸಲು ಪೋಪ್ ಅವರು ಆ ದೇಶಕ್ಕೆ ಆರು ದಿವಸಗಳ ಪ್ರವಾಸ ಕೈಗೊಂಡಿದ್ದು, ಗುರುವಾರ ಐದನೆ ದಿನವಾಗಿತ್ತು.

1870 ಹಾಗೂ 1996ರ ನಡುವೆ 1.50 ಲಕ್ಷಕ್ಕೂ ಅಧಿಕ ಮೂಲನಿವಾಸಿಗಳ ಮಕ್ಕಳನ್ನು ಅವರ ಕುಟುಂಬಗಳಿಗೆ ಬೇರ್ಪಡಿಸಿ ಮಿಶನರಿಗಳು ನಡೆಸುತ್ತಿದ್ದ ವಸತಿ ಶಾಲೆಗಳಲ್ಲಿ ಇರಿಸಲಾಗಿತ್ತು.

  

ತಮ್ಮ ಮೂಲನಿವಾಸಿ ಭಾಷೆಗಳಲ್ಲಿ ಮಾತನಾಡಿದ್ದಕ್ಕಾಗಿ ಈ ಮಕ್ಕಳಿಗೆ ಆಹಾರ ನೀಡದೆ ಹಸಿವಿನಿಂದ ಬಳಲುವಂತೆ ಮಾಡಲಾಗುತ್ತಿತ್ತು ಹಾಗೂ ಅವರಲ್ಲಿ ಹಲವರ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಲಾಗಿತ್ತು. ಈ ದೌರ್ಜನ್ಯಗಳು ಸಾಂಸ್ಕೃತಿಕ ನರಮೇಧವಾಗಿತ್ತೆಂದು ಹಗರಣದ ಬಗ್ಗೆ ತನಿಖೆ ನಡೆಸಿದ್ದ ಕೆನಡಾದ ಸತ್ಯ ಹಾಗೂ ಸಂಧಾನ ಆಯೋಗವು ಬಣ್ಣಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News