ಪದತ್ಯಾಗದ ಸಾಧ್ಯತೆಯನ್ನೂ ತೆರೆದಿಟ್ಟ ಪೋಪ್‌

Update: 2022-07-30 15:49 GMT

ವ್ಯಾಟಿಕನ್,ಜು.30: ತನಗೆ ಮೊಣಕಾಲ ನೋವಿನ ಸಮಸ್ಯೆಯ ಕಾರಣದಿಂದಾಗಿ ತನಗೆ ಈ ಹಿಂದಿನಂತೆ ದೀರ್ಘವಾದ ಪ್ರವಾಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪೋಪ್ ಫ್ರಾನ್ಸಿಸ್ ಶುಕ್ರವಾರ ಹೇಳಿದ್ದಾರೆ. ತನ್ನ ಕೆನಡಾ ಯಾತ್ರೆಯು ತನಗೊಂದು ಸಣ್ಣ ಮಟ್ಟದ ಪರೀಕ್ಷೆಯಾಗಿತ್ತು ಹಾಗೂ ತಾನು ಒಂದಲ್ಲ ಒಂದು ದಿನ ಖಂಡಿತವಾಗಿಯೂ ನಿವೃತ್ತಿಯಾಗಬೇಕೆಂಬುದನ್ನು ಮನದಟ್ಟು ಮಾಡಿಕೊಟ್ಟಿದೆಯೆಂದು ಅವರು ಹೇಳಿದ್ದಾರೆ.

ಆದಾಗ್ಯೂ ತಾನು ಸದ್ಯಕ್ಕೆ ನಿವೃತ್ತಿಯಾಗುವ ಬಗ್ಗೆ ಯೋಚನೆ ಮಾಡಿಲ್ಲ. ಆದರೆ ಇದಕ್ಕಾಗಿ ಮುಕ್ತವಕಾಶದ ಬಾಗಿಲನ್ನು ತೆರೆದಿಡಲಾಗಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಕೆನಡದಿಂದ ವ್ಯಾಟಿಕನ್‌ ಗೆ ತೆರಳುತ್ತಿದ್ದಾಗ ತನ್ನ ಖಾಸಗಿ ವಿಮಾನದಲ್ಲಿ ಗಾಲಿ ಕುರ್ಚಿಯಲ್ಲಿ ಕುಳಿತುಕೊಂಡೇ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘‘ನೀವು ಪೋಪರನ್ನು ಬದಲಾಯಿಸಬಹುದಾಗಿದೆ. ಇದೇನೋ ದೊಡ್ಡ ವಿಷಯವಲ್ಲ, ಮಹಾದುರಂತವೂ ಅಲ್ಲ ’’ ಎಂದು ಫ್ರಾನ್ಸಿಸ್ ಮಾರ್ಮಿಕವೂ ಹೇಳಿದರು. ‘‘ ನನ್ನ ವಯಸ್ಸು ಆಹಾಗೂ ಅನಾರೋಗ್ಯಂದತಹ ಇತಿಮಿತಿಗಳ ಕಾರಣದಿಂದಾಗಿ, ಚರ್ಚ್ ವ್ಯವಸ್ಥೆಗೆ ಸೇವೆಸಲ್ಲಿಸಲು ನಾನು ನನ್ನ ಶಕ್ತಿಯನ್ನು ಉಳಿತಾಯ ಮಾಡಬೇಕಾಗಿದೆ. ಅಥವಾ ಇದೇ ವೇಳೆ ಪದತ್ಯಾಗ ಮಾಡುವ ಕುರಿತು ಯೋಚನೆಯನ್ನೂ ಕೂಡಾ ಮಾಡಬೇಕಾಗಿದೆ’’ ಎಂದರು.

ಪೋಪ್ ಅವರು ತನ್ನ ವಿದೇಶ ಪ್ರವಾಸದಲ್ಲಿ ಮೊದಲ ಬಾರಿಗೆ ಗಾಲಿಕುರ್ಚಿ, ವಾಕರ್ ಹಾಗೂ ಬೆತ್ತವನ್ನು ಬಳಸಿಕೊಂಡಿದ್ದಾರೆ ಮತ್ತು ಸೀಮಿತ ಕಾರ್ಯಕ್ರಮಗಳಲ್ಲಿಯಷ್ಟೇ ಭಾಗಿಯಾಗಿದ್ದಾರೆ ಹಾಗೂ ಜನರ ಜೊತೆಗಿನ ಭೇಟಿಯನ್ನು ಕೂಡಾ ಕಡಿಮೆಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News