ಭಾರತದಲ್ಲಿ ತರಬೇತಿ ಪಡೆದ ಅಫ್ಘಾನ್ ಮಿಲಿಟರಿ ಕೆಡೆಟ್ಗಳನ್ನು ಸ್ವಾಗತಿಸಿದ ತಾಲಿಬಾನ್

Update: 2022-07-30 16:02 GMT

ಕಾಬೂಲ್,ಜು.30: ಭಾರತದ ಜೊತೆಗೆ ಬಾಂಧವ್ಯ ವೃದ್ಧಿಯ ಸಂಕೇತವಾಗಿ ಅಫ್ಘಾನ್ನ ತಾಲಿಬಾನ್ ಆಡಳಿತವು , ಭಾರತದಲ್ಲಿ ತರಬೇತಿ ಪೂರ್ಣಗೊಳಿಸಿ, ಕಾಬೂಲ್ಗೆ ವಾಪಸಾಗಿರುವ ಅಫ್ಘಾನ್ ಸೇನೆಯ ಕೆಡೆಟ್ಗಳ ಮೊದಲ ತಂಡಕ್ಕೆ ಶುಕ್ರವಾರ ಕೆಂಪುಹಾಸಿನ ಸ್ವಾಗತವನ್ನು ನೀಡಿದೆ. ಕಾಬೂಲ್ಗೆ ಹಿಂತಿರಿಗಿರುವ ಸುಮಾರು 25 ಮಂದಿ ಅಪ್ಘಾನ್ ಸೇನಾ ಕೆಡೆಟ್ಗಳು, ಡೆಹ್ರಾಡೂನ್ನ ಭಾರತೀಯ ಮಿಲಿಟರಿ ಅಕಾಡಮಿ (ಐಎಂಎ)ನಲ್ಲಿ ಕಳೆದ ಜೂನ್ 11ರಂದು ಉತ್ತೀರ್ಣರಾಗಿದ್ದರು.ಅಫ್ಘಾನ್ ಮಿಲಿಟರಿ ಅಕಾಡಮಿಯ ಈ 25 ಮಂದಿ ಕೆಡೆಟ್ಗಳನ್ನು ತಾಲಿಬಾನ್ ಅಧಿಕಾರಕ್ಕೆ ಬರುವ ಮುನ್ನ ತರಬೇತಿಗಾಗಿ ಭಾರತಕ್ಕೆ ಕಳುಹಿಸಲಾಗಿತ್ತು. ಈ ಕೆಡೆಟ್ಗಳ ಜೊತೆ ನೇರ ಸಂವಹನ ನಡೆಸಲು ತನಗೆ ಅವಕಾಶ ನೀಡಬೇಕೆಂದು ಕೋರಿ ಅಫ್ಘಾನಿಸ್ತಾನದ ರಕ್ಷಣಾ ಇಲಾಖೆಯ ತಾಂತ್ರಿಕ ತಂಡವು, ಕಾಬೂಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿತ್ತು.

 ಅಫ್ಘಾನ್ ರಕ್ಷಣಾ ಇಲಾಖೆ ಹಾಗೂ ಅಫ್ಘಾನ್ ಕೆಡೆಟ್ಗಳ ನಡುವಿನ ಮಾತುಕತೆಗಳಿಗೆ ಭಾರತದ ವಿದೇಶಾಂಗ ಇಲಾಖೆ ಸೇರಿದಂತೆ ಸರಕಾರಿ ಏಜೆನ್ಸಿಗಳು , ಏರ್ಪಾಡುಗಳನ್ನು ಮಾಡಿದ್ದವು. ಅಫ್ಘಾನ್ ರಕ್ಷಣಾ ಇಲಾಖೆಯಿಂದ ಸುರಕ್ಷತೆ ಹಾಗೂ ಉದ್ಯೋಗದ ಭರವಸೆ ದೊರೆತ ಬಳಿಕ ಈ ಕೆಡೆಟ್ಗಳು 28ರಂದು ಕಾಬೂಲ್ಗೆ ವಾಪಸಾಗಿವೆಯೆಂದು ತಾಲಿಬಾನ್ ನೇತೃತ್ವದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.ಈ ಕೆಡೆಟ್ಗಳು ಭಾರತದಲ್ಲಿ ಪಡೆದ ತರಬೇತಿಯಿಂದ ಗಳಿಸಿದಂತಹ ಅನುಭವ, ನೈಪುಣ್ಯತೆಯನ್ನು ದೇಶದ ಭದ್ರತೆಯನ್ನು ಕಾಪಾಡುವುದಕ್ಕೆ ಬಳಸಿಕೊಳ್ಳಲು ಅಫ್ಘಾನ್ ಸರಕಾರವು ಉತ್ಸುಕವಾಗಿದೆಯೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News