ಕಾಸರಗೋಡು: ಮನೆಯ ಟೆರೇಸ್ ನಲ್ಲಿ ಗಾಂಜಾ ಗಿಡ ಬೆಳೆಸಿದ ಆರೋಪ; ಯುವಕ ಸೆರೆ
Update: 2022-08-01 09:11 IST
ಕಾಸರಗೋಡು : ಮನೆಯ ಟೆರೇಸ್ ನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ ಆರೋಪದಲ್ಲಿ ಯುವಕನೋರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬೇಕೂರು ಕನ್ನಡಿ ಪಾರೆಯ ನಜೀಬ್ ಮೆಹಫೂಝ್ (22) ಬಂಧಿತ ಆರೋಪಿ.
ಕುಂಬಳೆ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ತಪಾಸಣೆ ನಡೆಸಲಾಗಿದೆ. ಕಿದೂರಿನ ಬಾಡಿಗೆ ಮನೆ ಯೊಂದರಲ್ಲಿ ವಾಸವಾಗಿದ್ದ ಈತ ಟೆರೇಸ್ ನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಎನ್ನಲಾಗಿದ್ದು, 20 ಲೀಟರ್ ನೀರಿನ ಬಾಟಲಿಯ ಮೇಲ್ಭಾಗ ವನ್ನು ಕತ್ತರಿಸಿ ಅದರಲ್ಲಿ ಮಣ್ಣು ತುಂಬಿಸಿ ಗಿಡಗಳನ್ನು ಬೆಳೆಸಲಾಗಿದೆ ಎಂದು ತಿಳಿದುಬಂದಿದೆ.
ಹೀಗೆ ಮೂರು ಗಿಡಗಳನ್ನು ಪತ್ತೆ ಹಚ್ಚಲಾಗಿದ್ದು, ಈತ ಸ್ವಂತ ಬಳಕೆಗೆ ಅಲ್ಲದೆ ಮಾರಾಟಕ್ಕಾಗಿ ಗಾಂಜಾ ಗಿಡ ಗಳನ್ನು ಬೆಳೆಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಮಂಗಳೂರಿನ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ಈತ ಅಲ್ಲಿಂದಲೇ ಗಾಂಜಾ ಗಿಡದ ಬೀಜಗಳನ್ನು ಸಂಗ್ರಹಿಸಿರಬಹುದು ಎಂದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿ ರುವ ಪೊಲೀಸರು ತಿಳಿಸಿದ್ದಾರೆ.