×
Ad

ನಟ ಸಲ್ಮಾನ್ ಖಾನ್ ಗೆ ಬಂದೂಕು ಪರವಾನಗಿ ನೀಡಿದ ಮುಂಬೈ ಪೊಲೀಸರು

Update: 2022-08-01 10:05 IST
Photo:PTI

ಮುಂಬೈ: ನಟ ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ಬಂದ ಬೆದರಿಕೆ ಪತ್ರಗಳ ಹಿನ್ನೆಲೆಯಲ್ಲಿ ಸ್ವಯಂ ರಕ್ಷಣೆಗಾಗಿ ಅರ್ಜಿ ಸಲ್ಲಿಸಿದ ನಂತರ ಬಂದೂಕು ಪರವಾನಗಿಯನ್ನು ನೀಡಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಮೇ 29 ರಂದು ಪಂಜಾಬ್‌ನ ಮಾನ್ಸಾ ಬಳಿ ಗಾಯಕ ಸಿಧು ಮೂಸವಾಲಾ ಅವರನ್ನು ಗುಂಡಿಕ್ಕಿ ಕೊಂದ ಕೆಲವೇ ದಿನಗಳಲ್ಲಿ ಜೂನ್ ಆರಂಭದಲ್ಲಿ ನಟ ಸಲ್ಮಾನ್ ಖಾನ್ ಹಾಗೂ  ಅವರ ತಂದೆಗೆ ಕೊಲೆ ಬೆದರಿಕೆ ಬಂದಿತ್ತು.

ಕಳೆದ ತಿಂಗಳು ಸಲ್ಮಾನ್ ಖಾನ್ ಮುಂಬೈ ಪೊಲೀಸ್ ಆಯುಕ್ತರನ್ನು ಭೇಟಿಯಾದ ನಂತರ ಪರವಾನಗಿ ನೀಡಿಕೆ ಪ್ರಾಧಿಕಾರವು ಅಗತ್ಯ ತನಿಖೆಯನ್ನು ಆರಂಭಿಸಿತ್ತು.

ಬಂದೂಕು ಪರವಾನಗಿಗಾಗಿ ಪ್ರಮುಖ ಪೋಲೀಸ್ ಅಧಿಕಾರಿ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿ ಮಾಡಲು ಕಳೆದ ತಿಂಗಳ ಕೊನೆಯಲ್ಲಿ ನಟ ಮುಂಬೈ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು. ತನ್ನನ್ನು ಹಾಗೂ  ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ತಾನು ಬಂದೂಕು  ಹೊಂದಲು ಬಯಸುತ್ತೇನೆ  ಎಂದು ಸಲ್ಮಾನ್ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News