ಶಿವಸೇನೆ ನಾಯಕ ಸಂಜಯ್ ರಾವುತ್ ಜೊತೆ ನಾವಿದ್ದೇವೆ: ಕಾಂಗ್ರೆಸ್

Update: 2022-08-01 06:17 GMT
Photo:PTI

ಹೊಸದಿಲ್ಲಿ: ಪತ್ರಾ ಚಾಲ್ ಭೂ ಹಗರಣದಲ್ಲಿ ಶಿವಸೇನ ಸಂಸದ ಸಂಜಯ್ ರಾವುತ್ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿ ಬಂಧಿಸಿದ ಒಂದು ದಿನದ ನಂತರ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು ರಾವುತ್ ಅವರ ವಿರುದ್ಧ ತನಿಖಾ ಸಂಸ್ಥೆಯ ಕ್ರಮವನ್ನು ಖಂಡಿಸಿದ್ದಾರೆ ಹಾಗೂ  ಬಿಜೆಪಿಯು "ಬೆದರಿಕೆಯ ರಾಜಕೀಯವನ್ನು ಅನುಸರಿಸುತ್ತಿದೆ" ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಅವರು ಸಂಜಯ್ ರಾವುತ್ ಅವರಿಗೆ ಬೆಂಬಲವನ್ನು ನೀಡಿದರು ಹಾಗೂ ರಾವುತ್  ಅವರನ್ನು "ದೃಢವಿಶ್ವಾಸ ಮತ್ತು ಧೈರ್ಯದ ವ್ಯಕ್ತಿ" ಎಂದು ಕರೆದಿದ್ದಾರೆ.

"ಸಂಜಯ್ ರಾವತ್ ಮಾಡಿದ ಏಕೈಕ ಅಪರಾಧವೆಂದರೆ ಬಿಜೆಪಿ ಪಕ್ಷದ ಬೆದರಿಕೆಯ ರಾಜಕೀಯಕ್ಕೆ ಅಂಜದೆ ಇರುವುದು. ಅವರು ದೃಢವಿಶ್ವಾಸದ ಹಾಗೂ  ಧೈರ್ಯದ ವ್ಯಕ್ತಿ. ನಾವು ಸಂಜಯ್ ರಾವುತ್ ಜೊತೆಗಿದ್ದೇವೆ" ಎಂದು ಚೌಧುರಿ ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News