ದೋಹಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ: ಅಮೆರಿಕ

Update: 2022-08-02 15:58 GMT

ವಾಷಿಂಗ್ಟನ್, ಆ.2: ಅಲ್ಖೈದಾ ಮುಖಂಡ ಝವಾಹಿರಿಗೆ ಆಶ್ರಯ ಕಲ್ಪಿಸುವ ಮೂಲಕ ತಾಲಿಬಾನ್ ದೋಹಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಮಾಡಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಸೋಮವಾರ ಪ್ರತಿಕ್ರಿಯಿಸಿದ್ದಾರೆ. ತಮ್ಮ ಬದ್ಧತೆಗಳನ್ನು ಪಾಲಿಸಲು ತಾಲಿಬಾನ್ಗೆ ಇಷ್ಟವಿಲ್ಲ ಅಥವಾ ಅದು ಅಸಮರ್ಥವಾಗಿದೆ. ಹೀಗಿರುವಾಗ ನಾವು ಅಫ್ಘಾನ್ ಜನರನ್ನು ದೃಢವಾದ ಮಾನವೀಯ ನೆರವಿನೊಂದಿಗೆ ಬೆಂಬಲಿಸುವುದನ್ನು ಮುಂದುವರಿಸಲಿದ್ದೇವೆ ಮತ್ತು ಅವರ ಮಾನವ ಹಕ್ಕುಗಳ ರಕ್ಷಣೆಗಾಗಿ, ವಿಶೇಷವಾಗಿ ಮಹಿಳೆಯರು ಮತ್ತು ಬಾಲಕಿಯರ, ಪ್ರತಿಪಾದನೆ ಮುಂದುವರಿಸುತ್ತೇವೆ ಎಂದು ಬ್ಲಿಂಕೆನ್ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News