ಕಾಮನ್‍ವೆಲ್ತ್ ಕ್ರೀಡಾಕೂಟ; ಬೆಳ್ಳಿಗೆ ತೃಪ್ತಿಪಟ್ಟ ಭಾರತದ ಮಿಶ್ರ ಬ್ಯಾಡ್ಮಿಂಟನ್ ತಂಡ

Update: 2022-08-03 03:11 GMT
ಕಿಡಂಬಿ ಶ್ರೀಕಾಂತ್

ಬರ್ಮಿಂಗ್‍ಹ್ಯಾಂ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಪಟು ಕಿಡಂಬಿ ಶ್ರೀಕಾಂತ್ ಅವರು ರ‍್ಯಾಂಕಿಂಗ್ ನಲ್ಲಿ ತಮಗಿಂತ ಕೆಳಗಿರುವ ಮಲೇಷ್ಯಾದ ತ್ಸೆ ಯಂಗ್ ಅವರಿಗೆ ಶರಣಾಗುವ ಮೂಲಕ ಮಲೇಷ್ಯಾ ವಿರುದ್ಧ 1-3 ಸೋಲಿನೊಂದಿಗೆ ಭಾರತ ಮಿಶ್ರ ಬ್ಯಾಡ್ಮಿಂಟನ್ ತಂಡ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಇದು ಹಾಲಿ ಚಾಂಪಿಯನ್ ಭಾರತಕ್ಕೆ ಹಿನ್ನಡೆ. ಮಹಿಳಾ ಸಿಂಗಲ್ಸ್ ನಲ್ಲಿ ನಿರೀಕ್ಷೆಯಂತೆ ಪಿ.ವಿ.ಸಿಂಧು ಜಯ ಗಳಿಸಿದರು. ಆದರೆ ಪುರಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಡಬಲ್ಸ್ ಸೆಣಸಾಟದಲ್ಲಿ ಸೋಲು ಅನುಭವಿಸಿದರು. ಈ ಬಾರಿ ಚಿನ್ನದ ಪದಕ ಗೆಲ್ಲುವ ಮೂಲಕ ಮಲೇಷ್ಯಾ ನಾಲ್ಕು ವರ್ಷದ ಹಿಂದೆ ಆದ ಸೋಲಿಗೆ ಸೇಡು ತೀರಿಸಿಕೊಂಡಿತು.‌

ಚಿನ್ನದ ಪದಕ ಉಳಿಸಿಕೊಳ್ಳಲು ಭಾರತ ಪುರುಷರ ಡಬಲ್ಸ್ ನಲ್ಲಿ ರಂಕಿ ರೆಡ್ಡಿ ಮತ್ತು ಶೆಟ್ಟಿ, ಒಲಿಂಪಿಕ್ ಕಂಚಿನ ಪದಕ ವಿಜೇತ ಜೋಡಿಯಾದ ತೆಂಗ್ ಫಾಂಗ್ ಅರೋನ್ ಚಿಯಾ ಮತ್ತು ವೂಯಿ ಯಿಕ್ ಸೊಹ್ ಜೋಡಿ ವಿರುದ್ಧ ಗೆಲುವು ಸಾಧಿಸಬೇಕಿತ್ತು. ಮಹಿಳಾ ಡಬಲ್ಸ್ ತಂಡ ಮತ್ತು ಮಿಶ್ರ ಡಬಲ್ಸ್ ತಂಡ ದುರ್ಬಲವಾಗಿರುವುದರಿಂದ ಭಾರತ ಪುರುಷರ ಡಬಲ್ಸ್ ತಂಡದ ಮೇಲೆ ಅವಲಂಬಿಸಬೇಕಾಯಿತು. ಆದರೆ ಮಲೇಷ್ಯಾ ಜೋಡಿ ವಿರುದ್ಧ ಭಾರತದ ಜೋಡಿ 18-21, 15-21 ನೇರ ಸೆಟ್‍ಗಳಿಂದ ಸೋಲು ಅನುಭವಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News