×
Ad

ಮಧ್ಯಾಹ್ನದ ಊಟದ ಯೋಜನೆಯಲ್ಲಿ 11 ಕೋಟಿ ರೂ. ಲೂಟಿ; ಉ.ಪ್ರ.ದ ಸರಕಾರಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಪ್ರಕರಣ

Update: 2022-08-03 13:42 IST

ಆಗ್ರಾ/ಫಿರೋಝಾಬಾದ್: ಉತ್ತರ ಪ್ರದೇಶದ ಫಿರೋಝಾಬಾದ್‌ನ ಮೂಲ ಶಿಕ್ಷಣ ಇಲಾಖೆಯ ಶಾಲಾ ಪ್ರಾಂಶುಪಾಲರೊಬ್ಬರ ಮೇಲೆ ಮಧ್ಯಾಹ್ನದ ಊಟದ ಯೋಜನೆಯಲ್ಲಿ 11.46 ಕೋಟಿ ರೂ.ಲೂಟಿ ಮಾಡಿರುವುದಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಂಶುಪಾಲರು ಎನ್‌ಜಿಒ ನೋಂದಣಿಗೆ ನಕಲಿ ದಾಖಲೆಗಳನ್ನು ಬಳಸಿದ್ದಾರೆ ಹಾಗೂ ತನ್ನ ಇಲಾಖೆ ಹಾಗೂ  ಬ್ಯಾಂಕ್‌ಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಹಾಯದಿಂದ ಮಧ್ಯಾಹ್ನದ ಊಟದ ಯೋಜನೆಯ 11.46 ಕೋಟಿ ರೂ. ಕಬಳಿಸಿದ್ದಾರೆ ಎಂದು ಆಗ್ರಾದ ಪೊಲೀಸ್ ವರಿಷ್ಠಾಧಿಕಾರಿ (ವಿಜಿಲೆನ್ಸ್) ಮಂಗಳವಾರ ತಿಳಿಸಿದ್ದಾರೆ.

ಫಿರೋಝಾಬಾದ್ ಜಿಲ್ಲೆಯ ಮೂಲ ಶಿಕ್ಷಣ ಇಲಾಖೆಯ ಶಿಕ್ಷಕ ಚಂದ್ರಕಾಂತ್ ಶರ್ಮಾ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಾಗಿದೆ. ಶರ್ಮಾ ಫಿರೋಝಾಬಾದ್ ಜಿಲ್ಲೆಯ ಶಿಕೋಹಾಬಾದ್ ನಿವಾಸಿ. ಶರ್ಮಾ ಫಿರೋಝಾಬಾದ್ ಜಿಲ್ಲೆಯ ತುಂಡ್ಲಾದ ಜಾಜುಪುರದ ಪ್ರಾಥಮಿಕ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಎಸ್ಪಿ (ವಿಜಿಲೆನ್ಸ್) ಅಲೋಕ್ ಶರ್ಮಾ ಹೇಳಿದ್ದಾರೆ.

ಜುಲೈ 27 ರಂದು ಆಗ್ರಾದ ವಿಜಿಲೆನ್ಸ್ ಪೊಲೀಸ್ ಠಾಣೆಯಲ್ಲಿ ಮೂಲ ಶಿಕ್ಷಣ ಇಲಾಖೆ ಹಾಗೂ  ಬ್ಯಾಂಕ್‌ಗಳ ಇತರ ಕೆಲವು ಉದ್ಯೋಗಿಗಳ ಜೊತೆಗೆ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಫಿರೋಝಾಬಾದ್‌ನ ಶಿಕೋಹಾಬಾದ್‌ನಲ್ಲಿ ನೋಂದಾಯಿಸಲಾದ ‘ಸರಸ್ವತ್ ಅವಾಸಿಯ ಶಿಕ್ಷಾ ಸೇವಾ ಸಮಿತಿ’ ಎಂಬ ಎನ್‌ಜಿಒ ಮೂಲಕ ಚಂದ್ರಕಾಂತ್ ಶರ್ಮಾ ಹಣವನ್ನು ವಂಚಿಸಿದ್ದಾರೆ.

“ಸರ್ಕಾರೇತರ ಸಂಸ್ಥೆಯನ್ನು (ಎನ್‌ಜಿಒ) 2007 ರಲ್ಲಿ ಆಗ್ರಾದಲ್ಲಿರುವ ಫರ್ಮ್ಸ್, ಸೊಸೈಟಿಗಳು ಮತ್ತು ಚಿಟ್‌ಗಳ ಉಪ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಲಾಗಿದೆ. ಎನ್‌ಜಿಒ ನೋಂದಾಯಿಸಲು ಶರ್ಮಾ ನಕಲಿ ಪಡಿತರ ಚೀಟಿ ಹಾಗೂ  ಗುರುತಿನ ಚೀಟಿಗಳನ್ನು ಬಳಸಿದ್ದರು ಎಂದು ಅಲೋಕ್ ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News