×
Ad

ಪ್ರಧಾನಿ ಮೋದಿ ನಂತರ ಟ್ವಿಟರ್ ಪ್ರೊಫೈಲ್ ಫೋಟೊ ಬದಲಾಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

Update: 2022-08-03 13:58 IST
ರಾಹುಲ್ ಗಾಂಧಿ (File Photo: PTI)

ಹೊಸದಿಲ್ಲಿ: ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ “ಹರ್ ಘರ್ ತಿರಂಗ” ಆಚರಣೆಯ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರೊಫೈಲ್ ಚಿತ್ರ ಬದಲಿಸಿದ  ಒಂದು ದಿನದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ತಮ್ಮ ಟ್ವಿಟರ್ ಪ್ರೊಫೈಲ್ ಫೋಟೋವನ್ನು ಬದಲಾಯಿಸಿದ್ದಾರೆ.

ರಾಹುಲ್ ಗಾಂಧಿಯವರ ಹೊಸ ಟ್ವಿಟರ್ ಪ್ರೊಫೈಲ್ ಫೋಟೊದಲ್ಲಿ  ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ರಾಷ್ಟ್ರಧ್ವಜವನ್ನು ಹಿಡಿದಿರುವ ಚಿತ್ರ ಕಂಡುಬಂದಿದೆ. ಮಾಜಿ ಪ್ರಧಾನಿ ಚಿತ್ರ ಕಪ್ಪು ಬಿಳುಪಿನಲ್ಲಿದ್ದರೆ, ರಾಷ್ಟ್ರಧ್ವಜ ಬಣ್ಣದಲ್ಲಿದೆ.

"ತ್ರಿವರ್ಣ ಧ್ವಜವು ದೇಶದ ಹೆಮ್ಮೆ. ಅದು ಪ್ರತಿಯೊಬ್ಬ ನಾಗರಿಕನ ಹೃದಯದಲ್ಲಿದೆ" ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News