ಕಾಮನ್‌ವೆಲ್ತ್ ಗೇಮ್ಸ್: ವೇಟ್‌ಲಿಫ್ಟರ್ ಲವ್‌ಪ್ರೀತ್ ಸಿಂಗ್‌ಗೆ ಕಂಚು
Update: 2022-08-03 17:10 IST
ಹೊಸದಿಲ್ಲಿ, ಅ.3: ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 109 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ವೇಟ್ ಲಿಫ್ಟರ್ ಲವ್‌ಪ್ರೀತ್ ಸಿಂಗ್ ಕಂಚಿನ ಪದಕವನ್ನು ಜಯಿಸಿದ್ದಾರೆ. ಈ ಮೂಲಕ ಭಾರತದ ಪದಕ ಪಟ್ಟಿಗೆ ಮತ್ತೊಂದು ಪದಕ ಸೇರ್ಪಡೆಗೊಳಿಸಿದರು.
ಸಿಂಗ್ ಒಟ್ಟು 355 ಕೆಜಿ ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು. ಸ್ನಾಚ್ ವಿಭಾಗದ ಅಂತಿಮ ಪ್ರಯತ್ನದಲ್ಲಿ 163 ಕೆಜಿ ಹಾಗೂ ಕ್ಲೀನ್ ಆ್ಯಂಡ್ ಜರ್ಕ್ ವಿಭಾಗದಲ್ಲಿ 192 ಕೆಜಿ ಎತ್ತಿದರು. ಕ್ಯಾಮರೂನ್‌ನ ಜೂನಿಯರ್ ಪೆರಿಕ್ಲೆಕ್ಸ್ ನ್ಯಾಬೆ ಒಟ್ಟು 361 ಕೆಜಿ ಎತ್ತುವುದರೊಂದಿಗೆ ಚಿನ್ನ ಜಯಿಸಿದರು. ಸಮೋವಾದ ಜಾಕ್ ಹಿಟಿಲಾ ಒಪೆಲೋಜ್ ಒಟ್ಟು 358 ಕೆ.ಜಿ.ಭಾರ ಎತ್ತುವುದರೊಂದಿಗೆ ಬೆಳ್ಳಿ ಪದಕ ಜಯಿಸಿದರು.