ಪ.ಬಂಗಾಳ ಸಚಿವ ಸಂಪುಟ ಪುನರ್ ರಚನೆ: ಬಾಬುಲ್ ಸುಪ್ರಿಯೊ ಸಹಿತ 9 ನೂತನ ಸಚಿವರ ಪ್ರಮಾಣವಚನ
ಕೋಲ್ಕತಾ,ಆ.3: ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬುಧವಾರ ತನ್ನ ಸಂಪುಟದ ಪುನರ್‌ರಚನೆ ಮಾಡಿದ್ದು,ಬಾಬುಲ್ ಸುಪ್ರಿಯೊ ಸೇರಿದಂತೆ ಒಂಭತ್ತು ಸಚಿವರು ಪ್ರಮಾಣವಚನ ಸ್ವೀಕರಿಸಿದರು.
ಸಂಪುಟ ದರ್ಜೆ ಸಚಿವರಾದ ಬಾಬುಲ್ ಸುಪ್ರಿಯೊ,ಸ್ನೇಹಶೀಷ್ ಚಕ್ರವರ್ತಿ,ಪಾರ್ಥಾ ಭೌಮಿಕ್,ಉದಯನ ಗುಹಾ ಮತ್ತು ಪ್ರದೀಬ ಮುಜುಮ್ದಾರ್,ಸ್ವತಂತ್ರ ಖಾತೆಯ ಸಹಾಯಕ ಸಚಿವರಾದ ಬಿಪ್ಲಬ್ ರಾಯ್ ಚೌಧರಿ ಹಾಗೂ ಸಹಾಯಕ ಸಚಿವರಾದ ತಜ್ಮುಲ್ ಹುಸೇನ್ ಮತ್ತು ಸತ್ಯಜಿತ ಬರ್ಮನ್ ಅವರಿಗೆ ರಾಜ್ಯಪಾಲ ಲ.ಗಣೇಶನ್ ಅವರು ಪ್ರಮಾಣ ವಚನವನ್ನು ಬೋಧಿಸಿದರು.
ಸಹಾಯಕ ಅರಣ್ಯ ಸಚಿವೆಯಾಗಿದ್ದ ಬೀರಬಾಹಾ ಹಾಂಸದಾ ಅವರನ್ನು ಸ್ವತಂತ್ರ ಖಾತೆಯೊಂದಿಗೆ ಸಹಾಯಕ ಸಚಿವೆಯನ್ನಾಗಿ ಮಾಡಲಾಗಿದೆ.
ಈಗ ಅಮಾನತುಗೊಂಡಿರುವ ಸಚಿವ ಪಾರ್ಥ ಚಟರ್ಜಿಯವರ ಬಂಧನದಿಂದಾಗಿ ಪಕ್ಷವು ಎದುರಿಸುತ್ತಿರುವ ಬಿಸಿಯ ನಡುವೆಯೇ ಸಂಪುಟ ಪುನರ್‌ರಚನೆ ನಡೆದಿದೆ. ಚಟರ್ಜಿ ಕೈಗಾರಿಕೆ,ವಾಣಿಜ್ಯ ಮತ್ತು ಉದ್ಯಮಗಳು,ಮಾಹಿತಿ ತಂತ್ರಜ್ಞಾನ ಹಾಗೂ ಸಂಸದೀಯ ವ್ಯವಹಾರಗಳು ಸೇರಿದಂತೆ ನಾಲ್ಕು ಪ್ರಮುಖ ಖಾತೆಗಳನ್ನು ಹೊಂದಿದ್ದರು.