ಪೆಲೋಸಿ ತೈವಾನ್ ಭೇಟಿಯನ್ನು ಕಡೆಗಣಿಸುವಂತಿಲ್ಲ: ರಶ್ಯಾ

Update: 2022-08-03 15:53 GMT

ಮಾಸ್ಕೊ, ಆ.3: ಅಮೆರಿಕ ಸಂಸತ್‌ನ ಸ್ಪೀಕರ್ ನ್ಯಾನ್ಸಿ ಪೆಲೋಸಿಯ ತೈವಾನ್ ಭೇಟಿಯಿಂದ ಪ್ರಚೋದಿಸಲ್ಪಟ್ಟ ಉದ್ವಿಗ್ನತೆಯ ಮಟ್ಟವನ್ನು ಕಡೆಗಣಿಸುವಂತಿಲ್ಲ ಎಂದು ರಶ್ಯ ಬುಧವಾರ ಹೇಳಿದೆ. ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್, ಪೆಲೋಸಿ ತೈವಾನ್ ಭೇಟಿಯ ಹಿನ್ನೆಲೆಯಲ್ಲಿ, ತಕ್ಷಣಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಹಾಗೂ ರಶ್ಯ ಅಧ್ಯಕ್ಷ ಪುಟಿನ್ ಮಧ್ಯೆ ಮಾತುಕತೆಯ ಪ್ರಸ್ತಾಪವಿಲ್ಲ ಎಂದರು. ವಿಶ್ವಕ್ಕೆ ಮತ್ತೊಂದು ಯುದ್ಧ ಸನ್ನಿಹಿತವಾಗಿದೆಯೇ ಎಂಬ ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಆ ಪದದ ಬಳಸುವುದನ್ನು ತಾನು ಬಯಸುವುದಿಲ್ಲ. ಆದರೆ ಒಂದಂತೂ ಸತ್ಯ, ಪೆಲೋಸಿ ಭೇಟಿ ಖಂಡಿತಾ ಪ್ರಚೋದನಕಾರಿ ಕ್ರಮ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News