ಆರೆಸ್ಸೆಸ್ ಪ್ರಧಾನ ಕಚೇರಿಯಲ್ಲಿ 52 ವರ್ಷಗಳಿಂದ ತ್ರಿವರ್ಣ ಧ್ವಜವನ್ನು ಏಕೆ ಹಾರಿಸಲಿಲ್ಲ: ರಾಹುಲ್‌ ಗಾಂಧಿ

Update: 2022-08-03 18:33 GMT
photo credit -@RahulGandhi

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ‘ಹರ್ ಘರ್ ತಿರಂಗಾ’ ಅಭಿಯಾನದ ಬಗ್ಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ಬುಧವಾರ ವ್ಯಂಗ್ಯವಾಡಿದ್ದಾರೆ ಮತ್ತು ಆರೆಸ್ಸೆಸ್ ತನ್ನ ಪ್ರಧಾನ ಕಚೇರಿಯಲ್ಲಿ 52 ವರ್ಷಗಳಿಂದ ತ್ರಿವರ್ಣ ಧ್ವಜವನ್ನು ಏಕೆ ಹಾರಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಹುಬ್ಬಳ್ಳಿಯ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಭೇಟಿ ನೀಡಿ ತ್ರಿವರ್ಣ ಧ್ವಜ ನೇಯುವ ಕಾರ್ಮಿಕರನ್ನು ಭೇಟಿ ಮಾಡಿದರು.

ನಂತರ, ಫೇಸ್‌ಬುಕ್ ಪೋಸ್ಟ್‌ನಲ್ಲಿ ಆರೆಸ್ಸೆಸ್ ನಿರಂತರವಾಗಿ ತ್ರಿವರ್ಣ ಧ್ವಜವನ್ನು ಅವಮಾನಿಸುತ್ತಿದೆ ಎಂದು ಟೀಕಿಸಿದರು.   ಅದೇ ಸಂಘಟನೆಯ ಮಂದಿ ಈಗ ʼಹರ್‌ ಘರ್‌ ತಿರಂಗಾʼ ಅಭಿಯಾನ ಮಾಡುತ್ತಿದ್ದಾರೆ ಎಂದು ಗಾಂಧಿ ಹೇಳಿದರು.

"ತ್ರಿವರ್ಣ ಧ್ವಜವನ್ನು ಎತ್ತರದಲ್ಲಿ ಇಡಲು ಲಕ್ಷಾಂತರ ದೇಶವಾಸಿಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು, ಆದರೆ ಒಂದು ಸಂಘಟನೆಯು ಯಾವಾಗಲೂ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಳ್ಳಲು ನಿರಾಕರಿಸಿತು, 52 ವರ್ಷಗಳ ಕಾಲ ನಾಗ್ಪುರದ ತನ್ನ ಪ್ರಧಾನ ಕಛೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಿಲ್ಲ ಮತ್ತು ನಿರಂತರವಾಗಿ ತ್ರಿವರ್ಣ ಧ್ವಜವನ್ನು ಅವಮಾನಿಸಿತು." ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇಂದು ಅದೇ ಸಂಘಟನೆಯಿಂದ ಹೊರಬಂದವರು ತ್ರಿವರ್ಣ ಧ್ವಜದ ಇತಿಹಾಸವನ್ನು ಹೇಳುತ್ತಿದ್ದಾರೆ ಮತ್ತು ‘ಹರ್ ಘರ್ ತ್ರಿವರ್ಣ’ ಅಭಿಯಾನವನ್ನು ನಡೆಸುತ್ತಿದ್ದಾರೆ ಎಂದು ರಾಹುಲ್‌ ಪೋಸ್ಟ್‌ ಮಾಡಿದ್ದಾರೆ.

 “ತಮ್ಮ ಪ್ರಚಾರವನ್ನು ಉತ್ತೇಜಿಸುವವರಿಗೆ ನಾನು ಅದೇ ಪ್ರಶ್ನೆಯನ್ನು ಮತ್ತೆ ಕೇಳುತ್ತಿದ್ದೇನೆ, ಆರ್‌ಎಸ್‌ಎಸ್ ತನ್ನ ಪ್ರಧಾನ ಕಚೇರಿಯಲ್ಲಿ 52 ವರ್ಷಗಳ ಕಾಲ ತ್ರಿವರ್ಣ ಧ್ವಜವನ್ನು ಏಕೆ ಹಾರಿಸಲಿಲ್ಲ? ಖಾದಿಯಿಂದ ರಾಷ್ಟ್ರಧ್ವಜ ತಯಾರಿಸುವವರ ಬದುಕು ಏಕೆ ನಾಶವಾಗುತ್ತಿದೆ? ಚೀನಾದಿಂದ ತಯಾರಿಸಿದ ಯಂತ್ರ, ಪಾಲಿಯೆಸ್ಟರ್ ಧ್ವಜಗಳ ಆಮದನ್ನು ಏಕೆ ಅನುಮತಿಸಲಾಗಿದೆ?” ಎಂಬ ಪ್ರಶ್ನೆಗಳನ್ನೂ ರಾಹುಲ್‌ ಗಾಂಧಿ ಮುಂದಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News