ಕಾರ್ಕಳ ನ್ಯಾಯಾಲಯದ ಆವರಣದಲ್ಲಿ ವಕೀಲರಿಂದ ಪ್ರತಿಭಟನೆ

Update: 2022-08-04 07:55 GMT

ಕಾರ್ಕಳ : ಜನನ ಮರಣ ನೋಂದಣಿ ಕಾಯ್ದೆಯು ಕಲಂ13 (3)ಗೆ ಕರ್ನಾಟಕ ಸರಕಾರ ತಿದ್ದುಪಡಿ ಮಾಡಿ ಮ್ಯಾಜಿಸ್ಟ್ರೇಟ್ ಕೋರ್ಟ್‌ ವ್ಯಾಪ್ತಿಯಿಂದ ಉಪವಿಭಾಗಾಧಿಕಾರಿ ಅವರಿಗೆ ನೀಡಲು ನಿರ್ಧರಿಸಿರುವುದನ್ನು ವಿರೋಧಿಸಿ ಕಾರ್ಕಳ ನ್ಯಾಯಾಲಯದ ಆವರಣದಲ್ಲಿ ವಕೀಲರು ಇಂದು ಪ್ರತಿಭಟನೆ ನಡೆಸಿದರು.

ವಕೀಲರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಮಾತನಾಡಿ, ಸರಕಾರದ ಹೊಸ ನಿಯಮದಿಂದ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತೆ ಆಗುವುದು. ಉಪವಿಭಾಗಾಧಿಕಾರಿ ಕಚೇರಿಯಲ್ಲಿ ವಿಚಾರಣೆ ಕೂಡ ನ್ಯಾಯಬದ್ಧವಾಗಿ ನಡೆಯಲು ಸಾಧ್ಯವಿಲ್ಲ ಎಂದರು.

ಹಿರಿಯ ವಕೀಲ ಕೆ. ಬಾಲಕೃಷ್ಣ ಶೆಟ್ಟಿ, ಎಚ್. ಶೇಖರ ಮಡಿವಾಳ್, ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್, ಉಪಾಧ್ಯಕ್ಷ ದಯಾನಂದ ನಾಯಕ್, ಸನತ್ ಕುಮಾರ್ ಜೈನ್, ರವೀಂದ್ರ ಮೊಯ್ಲಿ, ಎಸ್ ಎ ಶರೀಫ್, ಬಾರ್ ಅಸೋಸಿಯೇಶನ್ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News