ಥೈಲ್ಯಾಂಡ್ ನ ನೈಟ್‌ಕ್ಲಬ್‌ನಲ್ಲಿ ಬೆಂಕಿ: 13 ಮಂದಿ ಮೃತ್ಯು; 40 ಮಂದಿಗೆ ಗಾಯ

Update: 2022-08-05 16:41 GMT

ಬ್ಯಾಂಕಾಕ್, ಆ.5: ಥೈಲ್ಯಾಂಡ್ನ ನೈಟ್‌ಕ್ಲಬ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಅಗ್ನಿದುರಂತದಲ್ಲಿ ಕನಿಷ್ಟ 13 ಮಂದಿ ಮೃತಪಟ್ಟಿದ್ದು ಇತರ 40 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಸತ್ತಾಹಿಪ್ ಜಿಲ್ಲೆಯ ಚೊನ್ಬುರಿ ಪ್ರಾಂತದ ಮೌಂಟೇನ್ ಬಿ ನೈಟ್‌ಕ್ಲಬ್‌ನಲ್ಲಿ ಸ್ಥಳೀಯ ಕಾಲಮಾನ ಶುಕ್ರವಾರ ಬೆಳಿಗ್ಗೆ 1 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಕ್ಲಬ್ ನ ಗೋಡೆಗೆ ಅಂಟಿಸಿದ್ದ ರಟ್ಟಿಗೆ ಬೆಂಕಿಯ ಕಿಡಿ ಹಾರಿದ್ದು ತಕ್ಷಣ ಇಡೀ ಕಟ್ಟಡವನ್ನು ಆವರಿಸಿಕೊಂಡಿದೆ. 3 ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಕ್ಲಬ್ನ ಪ್ರವೇಶ ದ್ವಾರದಲ್ಲಿ 4 ಮಹಿಳೆಯರು ಮತ್ತು 9 ಪುರುಷರ ಮೃತದೇಹ ಪತ್ತೆಯಾಗಿದೆ. ಬೆಂಕಿ ಕಾಣಿಸಿಕೊಂಡಾಗ ಕ್ಲಬ್ನಲ್ಲಿ ಇದ್ದವರು ಏಕಾಏಕಿ ಪ್ರವೇಶದ್ವಾರದ ಬಳಿ ಜಮಾಯಿಸಿದ್ದರಿಂದ ಹಲವರು ಕೆಳಗೆ ಬಿದ್ದಿದ್ದಾರೆ. ಹಲವರ ದೇಹದಲ್ಲಿ ಸುಟ್ಟ ಗಾಯಗಳಿವೆ. ಮೃತಪಟ್ಟವರು ಸ್ಥಳೀಯರು ಎಂದು ಪ್ರಾಥಮಿಕ ವರದಿ ತಿಳಿಸಿದೆ. ವಿದೇಶೀಯರು ಮೃತಪಟ್ಟಿರುವ ಸಾಧ್ಯತೆ ಇಲ್ಲ ಎಂದು ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News