ಕಾಮನ್ ವೆಲ್ತ್ ಗೇಮ್ಸ್: 10,000 ಮೀ.ರೇಸ್ ವಾಕ್ ನಲ್ಲಿ ಪ್ರಿಯಾಂಕಾ ಗೋಸ್ವಾಮಿಗೆ ಬೆಳ್ಳಿ

Update: 2022-08-06 11:43 GMT
Photo:twitter

ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನ 9ನೇ ದಿನವಾದ ಶನಿವಾರ ಭಾರತದ ಪ್ರಿಯಾಂಕಾ ಗೋಸ್ವಾಮಿ ಅವರು ಮಹಿಳೆಯರ  10,000 ಮೀ. ರೇಸ್ ವಾಕ್ ನಲ್ಲಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಮಹಿಳೆಯರ 10,000 ಮೀ. ರೇಸ್ ವಾಕ್  ಫೈನಲ್ ನಲ್ಲಿ  43 ನಿಮಿಷ, 38  ಸೆಕೆಂಡ್ ನಲ್ಲಿ ಗುರಿ ತಲುಪಿದ ಪ್ರಿಯಾಂಕಾ ಎರಡನೇ ಸ್ಥಾನ ಪಡೆದರೆ, ಆಸ್ಟ್ರೇಲಿಯದ ಜಮಿಮಾ ಮೊನ್ ಟಾಗ್ (42.34  ಸೆಕೆಂಡ್) ಮೊದಲ ಸ್ಥಾನ ಪಡೆದರು.

ಪ್ರಿಯಾಂಕಾ ಪ್ರಸಕ್ತ ಗೇಮ್ಸ್ ನಲ್ಲಿ  ಭಾರತಕ್ಕೆ 27ನೇ ಪದಕ ಗೆದ್ದುಕೊಟ್ಟರು. ಟ್ರ್ಯಾಕ್ ಆ್ಯಂಡ್ ಫೀಲ್ಡ್ ನಲ್ಲಿ ಮುರಳಿ ಶಂಕರ್(ಬೆಳ್ಳಿ, ಲಾಂಗ್  ಜಂಪ್)ಹಾಗೂ ತೇಜಸ್ವಿನ್ ಶಂಕರ್(ಕಂಚು, ಹೈಜಂಪ್)ಬಳಿಕ ಭಾರತಕ್ಕೆ 3ನೇ ಪದಕ ಗೆದ್ದುಕೊಟ್ಟರು.

ಪ್ರಿಯಾಂಕಾ ರೇಸ್ ವಾಕ್ ನಲ್ಲಿ ಪದಕ ಗೆದ್ದ  ಭಾರತದ ಮೊದಲ ಮಹಿಳಾ ರೇಸ್ ವಾಕರ್ ಆಗಿದ್ದಾರೆ. ಕಾಮನ್ ವೆಲ್ತ್ ನಲ್ಲಿ ಪದಕ ಗೆದ್ದ ಭಾರತದ 2ನೇ ರೇಸ್ ವಾಕರ್ ಎನಿಸಿಕೊಂಡಿದ್ದಾರೆ. 2010ರ ಗೇಮ್ಸ್ ನಲ್ಲಿ 20 ಮೀ. ರೇಸ್ ವಾಕ್ ನಲ್ಲಿ ಹರ್ಮಿಂದರ್ ಸಿಂಗ್ ಕಂಚು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News