ಹೆಲಿಕಾಪ್ಟರ್ ಗೆ ನೇತುಬಿದ್ದು ಪುಲ್-ಅಪ್ಸ್; ವಿಶ್ವದಾಖಲೆ ಸೃಷ್ಟಿಸಿದ ವ್ಯಕ್ತಿ

Update: 2022-08-06 15:29 GMT
 ಸಾಂದರ್ಭಿಕ ಚಿತ್ರ,Photo: PTI

ನ್ಯೂಯಾರ್ಕ್, ಆ.6: ನೆದರ್ಲ್ಯಾಂಡಿನ ಸ್ಟ್ಯಾನ್ ಬ್ರೌನಿ ಎಂಬ ವ್ಯಕ್ತಿ ಆಗಸದಲ್ಲಿ ಹಾರಾಟದಲ್ಲಿದ್ದ ಹೆಲಿಕಾಪ್ಟರ್ಗೆ ಜೋತುಬಿದ್ದು ಒಂದು ನಿಮಿಷದಲ್ಲಿ 25 ಪುಲ್-ಅಪ್ಸ್ ಮಾಡುವ ಮೂಲಕ ವಿಶ್ವದಾಖಲೆ ಬರೆದಿರುವುದಾಗಿ ಗಿನ್ನೆಸ್ ವಿಶ್ವದಾಖಲೆ ಸಂಪುಟದ ಹೇಳಿಕೆ ತಿಳಿಸಿದೆ. ಫಿಟ್ನೆಸ್ ಉತ್ಸಾಹಿಯಾಗಿರುವ ಬ್ರೌನಿ ಯೂಟ್ಯೂಬ್ ಚಾನೆಲ್ ಅನ್ನೂ ಹೊಂದಿದ್ದು 2022ರ ಜುಲೈ 6ರಂದು ಬೆಲ್ಜಿಯಂನ ಹೊವೆನೆನ್ ವಿಮಾನನಿಲ್ದಾಣದಲ್ಲಿ ಸಹ ಅಥ್ಲೆಟ್ ಆರ್ಜೆನ್ ಆಲ್ಬರ್ಸ್ ಜತೆ ಈ ಸಾಧನೆ ಮಾಡಿದ್ದಾನೆ. ಇದಕ್ಕಾಗಿ ಇಬ್ಬರೂ ವಾರಗಟ್ಟಲೆ ಸಿದ್ಧತೆ ನಡೆಸಿದ್ದರು ಎಂದು ವರದಿಯಾಗಿದೆ.

ಅರ್ಮೇನಿಯಾದ ರೋಮನ್ ಸಹ್ರಾದ್ಯನ್ 23 ಪುಲ್-ಅಪ್ ನಡೆಸಿದ್ದು ಇದುವರೆಗಿನ ವಿಶ್ವದಾಖಲೆ ಆಗಿತ್ತು. ಜುಲೈ 6ರಂದು ವಿಶ್ವದಾಖಲೆ ಮುರಿಯುವ ಪ್ರಯತ್ನದಲ್ಲಿ ಮೊದಲು ಆರ್ಜೆನ್ ಆಲ್ಬರ್ಸ್ 24 ಪುಲ್-ಅಪ್ಸ್ ತೆಗೆದು ಹೊಸ ದಾಖಲೆ ಬರೆದ. ನಂತರ ಪ್ರಯತ್ನಿಸಿದ ಬ್ರೌನಿ 25 ಪುಲ್ಅಪ್ಸ್ ತೆಗೆದು ಆಲ್ಬರ್ಸ್ ದಾಖಲೆ ಮುರಿದಿದ್ದಾನೆ ಎಂದು ಗಿನ್ನೆಸ್ ವಿಶ್ವದಾಖಲೆ ಸಂಪುಟ ಪ್ರಕಟಿಸಿದೆ. ದಾಖಲೆ ಮುರಿದ ಸಾಧನೆಯ ವೀಡಿಯೊವನ್ನು ಗಿನ್ನೆಸ್ ಸಂಪುಟ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News