ಪ್ಯಾರಾ ಕೂಟದಲ್ಲೂ ಭಾರತದ ಪದಕ ಬೇಟೆ; ಭಾವಿನಾಗೆ ಟೇಬಲ್ ಟೆನಿಸ್‌ನಲ್ಲಿ ಚಿನ್ನ

Update: 2022-08-07 02:36 GMT
ಭಾವಿನಾ ಪಟೇಲ್ (ಫೋಟೊ : PTI)

ಬರ್ಮಿಂಗ್‍ಹ್ಯಾಂ: ಕಾಮನ್‍ವೆಲ್ತ್ ಕ್ರೀಡಾಕೂಟದ ಪ್ಯಾರಾ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಭಾವಿನಾ ಪಟೇಲ್ ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳೆಯರ ಸಿಂಗಲ್ಸ್‌ನ 3-5 ವರ್ಗದಲ್ಲಿ ಭಾವಿನಾ ಈ ಸಾಧನೆ ಮಾಡಿದರು.

ಗುಜರಾತ್‍ನ 35 ವರ್ಷ ವಯಸ್ಸಿನ ಭಾವಿನಾ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಶನಿವಾರ ಕೂಡಾ ಅದ್ಭುತ ಪ್ರದರ್ಶನ ತೋರಿದ ಅವರು 12-10, 11-2, 11-9ರಿಂದ ನೈಜೀರಿಯಾದ ಇಫೆಚುಕ್ವುಡೆ ಕ್ರಿಸ್ಟಿಯಾನಾ ವಿರುದ್ಧ ಜಯ ಸಾಧಿಸಿದರು.

2011 ಪಿಟಿಟಿ ಥಾಯ್ಲೆಂಡ್ ಓಪನ್‍ನಲ್ಲಿ ವೈಯಕ್ತಿಕ ವಿಭಾಗದ ಬೆಳ್ಳಿಪದಕ ಗೆಲ್ಲುವ ಮೂಲಕ ಭಾವಿನಾ ವಿಶ್ವದಲ್ಲಿ 2ನೇ ರ‍್ಯಾಂಕ್ ಪಡೆದಿದ್ದರು. ಇದರ ಜತೆಗೆ 2012ರ ಏಷ್ಯನ್ ಪ್ಯಾರಾ ಟೇಬಲ್ ಟೆನಿಸ್ ಚಾಂಪಿಯನ್‍ಶಿಪ್‍ನ ಕ್ಲಾಸ್-4ರಲ್ಲಿ ಬೆಳ್ಳಿಪದಕ ಪಡೆದಿದ್ದರು. 2017ರಲ್ಲಿ ಭಾವಿನಾ ಏಷ್ಯನ್ ಪ್ಯಾರಾ ಟೇಬಲ್ ಟೆನಿಸ್ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿಪದಕ ಗೆದ್ದ ಭಾವಿನಾ ಪಟೇಲ್ ಗೆ ಮೂರು ಕೋಟಿ ರೂ.ಬಹುಮಾನ ಘೋಷಿಸಿದ ಗುಜರಾತ್ ಸರಕಾರ

ಮತ್ತೊಬ್ಬ ಆಟಗಾರ್ತಿ ಸೊನಾಲ್‍ಬೆನ್ ಮನುಭಾಯಿ ಪಟೇಲ್ ಕೂಡಾ ಮಹಿಳಾ ಸಿಂಗಲ್ಸ್‌ನ ಕ್ಲಾಸ್ 3-5ರಲ್ಲಿ ಕಂಚಿನ ಪದಕ ಗೆದ್ದುಕೊಟ್ಟರು. ಪ್ಲೇ ಆಫ್ ಪಂದ್ಯದಲ್ಲಿ 34 ವರ್ಷದ ಭಾರತೀಯ ಆಟಗಾರ್ತಿ ಇಂಗ್ಲೆಂಡ್‍ನ ಸ್ಯೂ ಬೆಲ್ಲಿ ಅವರನ್ನು 11-5, 11-2, 11-3ರಲ್ಲಿ ಸೋಲಿಸಿದರು.

ಪ್ಯಾರಾ ಪವರ್‍ಲಿಫ್ಟಿಂಗ್‍ನಲ್ಲಿ ಭಾರತದ ಸುಧೀರ್ ಐತಿಹಾಸಿಕ ಚಿನ್ನ ಗೆದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News